ನಾವಾಡುವ ಪ್ರತಿಯೊಂದು ಶಬ್ದದಲ್ಲೂ ಬೆಳಕಿದೆ ಅನ್ನೋದನ್ನು
ನಾವೆಲ್ಲ ತಿಳಿದುಕೊಳ್ಳಬೇಕು.
ಶಬ್ದಗಳು ಗ್ರಂಥ ರೂಪವನ್ನು ಪಡೆದಾಗ ಸಮಾಜಕ್ಕೆ ಬೆಳಕು ಚಲ್ಲುವಂತ ಕೆಲಸಗಳು ನಡೆಯುತ್ತವೆ.
ಮುದ್ದೇಬಿಹಾಳ: ನಾವಾಡುವ ಪ್ರತಿಯೊಂದು ಶಬ್ದದಲ್ಲೂ ಬೆಳಕಿದೆ ಅನ್ನೋದನ್ನು ನಾವೆಲ್ಲ ತಿಳಿದುಕೊಳ್ಳಬೇಕು. ಶಬ್ದಗಳು ಗ್ರಂಥ ರೂಪವನ್ನು ಪಡೆದಾಗ ಸಮಾಜಕ್ಕೆ ಬೆಳಕು ಚಲ್ಲುವಂತ ಕೆಲಸಗಳು ನಡೆಯುತ್ತವೆ. ಚರಿತ್ರೆಯ ಜೊತೆಗೆ ಚಾರಿತ್ರವು ಶುದ್ಧವಾಗಿರುವ ಗ್ರಂಥದ ಶಬ್ದಗಳು ಮಾತೇ ಜ್ಯೋತಿರ್ಲಿಂಗದಂತೆ ಹೊಳೆಯುತ್ತವೆ ಎಂದು ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಜಗದ್ಗುರು ಡಾ. ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ತಾಲೂಕಿನ ನೆರಬೆಂಚಿ ಗ್ರಾಮದ ಎಚ್ಚರಸ್ವಾಮಿ ದೇವಸ್ಥಾನ ಆವರಣದಲ್ಲಿ ರವಿವಾರ ಏರ್ಪಡಿಸಿದ್ದ 208ನೇ ಶಿವಾನುಭವ ಗೋಷ್ಠಿಯಲ್ಲಿ ಬಹುಮುಖ ವ್ಯಕ್ತಿತ್ವದ ನಿವೃತ್ತ ಶಿಕ್ಷಕ ಎನ್.ಎಸ್.ಪೋಲೇಶಿ ಕುರಿತು ಡಾ. ಪ್ರಕಾಶ ನರಗುಂದ ಸಂಪಾದಿಸಿದ ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು. ಜಗತ್ತಿನಲ್ಲಿ ನಿತ್ಯವೂ ಸಾವಿರಾರು ಗ್ರಂಥ ಪ್ರಕಾಶನಗೊಳ್ಳುತ್ತವೆ. ಆದರೆ ನಾಗಪ್ಪ ಪೋಲೇಶಿ ಅವರು ಶಿಕ್ಷಕರಾಗಿ, ಜ್ಯೋತಿಷ್ಯ, ಭೂ ಸಮೀಕ್ಷೆ, ಆಪ್ತ ಸಲಹೆ, ನ್ಯಾಯ ನಿರ್ಣಯ ಜೊತೆಗೆ ಅನುಭವ ಮಂಟಪ ಮಾದರಿಯ ಶಿವಾನುಭವ ದೋಸ್ತಿ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾದರು ಎಂದರು.
ಧಾರವಾಡದ ಸಾಹಿತಿ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಸಂಗಮನಾಥ ಲೋಕಾಪುರ ಅವರು ಕೃತಿ ಪರಿಚಯ ಮಾಡಿಕೊಟ್ಟು ಸಮಾಜದಲ್ಲಿ ಎಲ್ಲವೂ ತಿಳಿದಿದೆ ಎಂದು ಎಲ್ಲ ವಿಷಯಗಳಲ್ಲಿ ತಲೆ ಹಾಕುವ ಅಪೇಕ್ಷಿತರು ಬಹಳ ಜನ ಇದ್ದಾರೆ ಅದರಂತೆ ಕಾಯಕ, ದಾಸೋಹದಲ್ಲಿ ತೊಡಗಿದ ಉಪೇಕ್ಷಿತರು ಇದ್ದಾರೆ ಅವರಿಗೆ ಪ್ರಚಾರ ಬೇಕಿಲ್ಲ. ಇನ್ನು ಕೆಲವರು ಬರೀ ಪ್ರಚಾರ ಇದ್ದಾರೆ. ಸಮಾಜಕ್ಕೆ ಎಲ್ಲವನ್ನೂ ಕೊಟ್ಟು ಸಮಾಜದಿಂದ ಏನನ್ನು ಬಯಸದವರು. ನಾಗಪ್ಪ ಪೊಲೇಶಿ ಶಿಕ್ಷಕರು ಗಣಿತ ತಜ್ಞರಾಗಿ ಹಳ್ಳಿಯ ಜನರಿಗೆ ಭೂಮಿಯ ಮೋಜಣಿ ಮಾಡುವುದರ ಜೊತೆಗೆ ಮನೆಯ ನ್ಯಾಯವನ್ನು ಬಗೆಹರಿಸುತ್ತಿದ್ದರು ಅವರ ಬಹುಮುಖ ವ್ಯಕ್ತಿತ್ವ
ಮಾದರಿಯದದ್ದು ಎಂದರು.
ಸಾನ್ನಿಧ್ಯ ವಹಿಸಿದ್ದ ಇಟಗಿ ಭೂಕೈಲಾಸ ಮೇಲುಗದ್ದುಗೆ ಹಿರೇಮಠದ ಡಾ. ಗುರುಶಾಂತವೀರ ಶಿವಾಚಾರ್ಯರು ಆಶಿರ್ವಚನ ನೀಡಿದರು. ಈ ಸಂದರ್ಭದಲ್ಲಿ ಎಂಜಿವಿಸಿ ವಿದ್ಯಾಪ್ರಸಾರಕ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ ಕಾರ್ಯಕ್ರಮ ಉದ್ಘಾಟಿಸಿದರು.
ರಥಶಿಲ್ಪಿ ಡಾ. ಪರಶುರಾಮ ಪವಾರ ಡಾ. ರಾಜಶೇಖರ ಹತ್ತರಸಂಗ, ನಿವೃತ್ತ ಪ್ರಾಚಾರ್ಯ ಬಿ.ಪಿ.ಪಾಟೀಲ, ನಿವೃತ್ತ ಮುಖ್ಯಾಧ್ಯಾಪಕ ಜಿ.ಎಚ್.ಪಾಟೀಲ, ಎಂ.ಎಸ್.ಬಿರಾದಾರ, ವಾಗ್ನಿ ಪರಶುರಾಮ ಚೌಡಕೇರ ಅನುಭವ ಗೋಷ್ಠಿ ನಡೆಸಿಕೊಟ್ಟರು. ಗ್ರಂಥಕರ್ತೃ ಎಂಜಿವಿಸಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ಪ್ರಕಾಶ ನರಗುಂದ, ಗ್ರಂಥ ಪ್ರಕಾಶಕ ಎಸ್ ಎನ್ ಪೊಲೇಶಿ ಎಸ್. ಎನ್.ಕಂಗಳ, ಆಲೂರಿನ ಶರಣಮ್ಮ ಹಿರೇಗೌಡರ, ಗುರುಲಿಂಗಪ್ಪಗೌಡ ಹಿರೇಗೌಡರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶಂಕರಗೌಡ ಹಿರೇಗೌಡರ, ಬಿ.ಪಿ.ಪಾಟೀಲ ವಚನಗಾಯನ ಮೂಲಕ ಪ್ರಾರ್ಥಿಸಿದರು. ಪ್ರೊ. ಎಸ್. ಎಸ್. ಹೂಗಾರ ಸ್ವಾಗತಿಸಿದರು. ಡಾ. ಆರ್ ಎಚ್ ಸಜ್ಜನ ನಿರೂಪಿಸಿದರು. ಸಂಗಮೇಶ ಶಿವಣಗಿ ಸಂಗೀತ ಸೇವೆ ನೀಡಿದರು.