ಸ್ನಾನಕ್ಕೆ ಹೋದ ಯುವಕ ನೀರುಪಾಲು..!
ಆಲಮಟ್ಟಿ: ಇಲ್ಲಿನ ಆಲಮಟ್ಟಿ ಎಡದಂಡೆ ಶಾಖಾ ಕಾಲುವೆಯಲ್ಲಿ ಸ್ನಾನಕ್ಕೆ ಹೋದ ಬಾಲಕ ನೀರು ಪಾಲಾಗಿರುವ ಘಟನೆ ಸೋಮವಾರ ಸಂಭವಿಸಿದೆ.
ಆಲಮಟ್ಟಿ-ಮುಳವಾಡ ಕೂಡು ರಸ್ತೆಯ ಕ್ರಾಸ್ ನಲ್ಲಿ ಬೇಕರಿ ಅಂಗಡಿಯ ಬಾಲಕ ರವಿ.ಮಂಜುನಾಥ. ಜಗ್ಗಲ್(15) ಎಂಬ ಬಾಲಕನು ದೀಪಾವಳಿ ಅಮವಾಸ್ಯೆಯ ಅಂಗವಾಗಿ ಬಟ್ಟೆಗಳನ್ನು ತೊಳೆದುಕೊಂಡು ಸ್ನಾನ ಮಾಡಲು ನೀರಿಗೆ ಇಳಿದಿದ್ದು, ಕಾಲುವೆ ನೀರಿನ ಹರಿವಿಗೆ ಸಿಲುಕಿ ನೀರು ಪಾಲಾಗಿದ್ದಾನೆ ಎಂದು ತಿಳಿದುಬಂದಿದೆ.
ಬಾಲಕನಿಗೆ ಸಮರ್ಪಕವಾಗಿ ಈಜು ಬಾರದಿದ್ದರೂ ನೀರಿಗೆ ಸ್ನಾನಕ್ಕೆ ಇಳಿದಿದ್ದಾನೆ, ಆತನ ಪತ್ತೆಗಾಗಿ ಪೊಲೀಸ್, ಅಗ್ನಿಶಾಮಕ ದಳ ಮತ್ತು ಆಲಮಟ್ಟಿಯ ನುರಿತ ಈಜುಗಾರರು ಶೋಧನೆ ಮಾಡುತ್ತಿದ್ದೇವೆ ಎಂದು ನಿಡಗುಂದಿ ಪೊಲೀಸ್ ಪಿಎಸೈ ಶಿವಾನಂದ ಪಾಟೀಲ ತಿಳಿಸಿದರು.



















