ಇಂಡಿ: ತಂದೆ ಸಾವಿನ ನಡೆಯುವ ಪುತ್ರನೊರ್ವ ಮತದಾನ ಮಾಡಿರುವ ಘಟನೆ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ಚನ್ನಗೊಂಡ ಶಂ. ಬಿರಾದಾರ (70) ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಆದರೆ ಪುತ್ರ ಮಲ್ಲನಗೌಡ ಬಿರಾದಾರ ಅಂತ್ಯಕ್ರಿಯೆ ನಡೆಸಿ ತದನಂತರ ಇಂದು ನಡೆದ ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಎರಡನೇ ಹಂತದ ನಿಮಿತ್ತವಾಗಿ ಲಚ್ಯಾಣ ಗ್ರಾಮದ ವಾರ್ಡ್ ನಂಬರ್ 1 ಬೂತ್ 21 ರಲ್ಲಿ ಮತದಾನ ಮಾಡಿದ್ದಾನೆ.
ಇನ್ನೂ ಮೃತರು ಪತ್ನಿ, ಓರ್ವ ಪುತ್ರ, ನಾಲ್ಕು ಪುತ್ರಿಯರು
ಸಹೋದರ, ಸಹೋದರಿ ಬಿಟ್ಟು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಿತು.