VOJ ನ್ಯೂಸ್ ಡೆಸ್ಕ್: ಎಂಟು ವರ್ಷದ ಬಾಲಕಿಯ ಹತ್ಯೆ ಮಾಡಿ ಬಳಿಕ ರುಂಡ ಹಿಡಿದು ಊರಿನ ಬೀದಿಗಳಲ್ಲಿ ಆರೋಪಿಯೊಬ್ಬ ಸುತ್ತಾಡಿದ್ದಾನೆ.
ಒಡಿಶಾದ ಸಂಬಾಲ್ಪುರದ ಜಮಾನಕಿರಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಬಾಲಕಿ ಮನೆಯಿಂದ ಹೊರಗಡೆ ತೆರಳಿದ್ದಾಗ ಆರೋಪಿ ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಬಳಿಕ ರುಂಡ ಹಿಡಿದು ಊರು ತುಂಬಾ ಸುತ್ತಾಡಿದ್ದಾನೆ. ಈ ಕುರಿತು ಪ್ರಶ್ನಿಸಿದ್ದ ಪತ್ನಿಯ ಮೇಲೆ ಕೂಡ ಹಲ್ಲೆ ನಡೆಸಿದ್ದಾನೆ.