ಅಫಜಲಪುರ: ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಲಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕವಾಗಿದೆ ಎಂದು ತಾಲೂಕಿನ ರಾಮನಗರ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಬೋರಮ್ಮ ಕುಂಬಾರ ಹೇಳಿದರು.
ಅವರು ರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕುಡಗನೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ
ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯದ ಮನೆಗೆ ಸೀಮಿತವಾಗಬಾರದೆಂಬ ಉದ್ದೇಶದಿಂದ ಮಹಿಳಾ ದಿನ ಆಚರಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಮಹಿಳೆಯರು ಸಮಾಜದಲ್ಲಿ ಪುರುಷರಿಗೆ ಸಮನಾಗಿ ಸೌಕರ್ಯ ಪಡೆಯಬೇಕು. ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯ.
ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸಿವೆ. ಮಹಿಳೆಯರು ಈ ಯೋಜನೆಗಳ ಸದುಪಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಅಂಗವಿಕಲರಿಗೆ ಹಿಟ್ಟಿನ ಗಿರಣಿಗಳನ್ನು,
ವಿತರಿಸಲಾಯಿತು. ರಾಮನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಕುರ್ಚಿ’ ರ್ಯಾಕ್ಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಖೇರುಬಾಯಿ ವಾಳುಕರ ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ ರುಕ್ಮಿಣಿಬಾಯಿ ಸಿಂಗೆ ಕಾರ್ಯದರ್ಶಿ ಗುರಣ್ಣ ಕರಿಗುಡ್ಢಿ ಸದಸ್ಯರಾದ ಶಾವರಸಿದ್ದ, ಜಮಾದಾರ ಕಮಲಾಬಾಯಿ ಅಳ್ಳಗಿ, ಅಪ್ಪಾರಾವ ಚವಡಿಹಾಳ ಅಶೋಕಗೌಡ ಬಿರಾದಾರ ಸಿದ್ದಣ್ಣಾ ಬಿರಾದಾರ, ಬಸನಗೌಡ ಪಾಟೀಲ, ಬಸನಿಂಗಯ್ಯ ಹಿರೇಮಠ, ಮಲ್ಲಣ್ಣಾಗೌಡ ಪಾಟೀಲ, ಚಂದ್ರಶೇಖರ, ಜಮಾದಾರ, ಗುರುಶಾಂತ ಅಳ್ಳಗಿ ಕಾಂತು ಮುನ್ನಳ್ಳಿ, ಮಹಾದೇವ ಜಮಾದಾರ, ಹಣಮಂತ ಬಂಡಗಾರ ಕುಪೇಂದ್ರ ಜಮಾದಾರ, ಶ್ರೀಶೈಲ ಅಳ್ಳಗಿ, ಬಸವರಾಜ ಸಿಂಗೆ,ಶ್ರೀದೇವಿ ಚಾನಕೋಟಿ ಶಿವಲೀಲಾ ತಳವಾರ ಸೇರಿದಂತೆ ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.