ಒಂದು ದೇಶದ ಅಭಿವೃದ್ಧಿಯಲ್ಲಿ ಇಂಜನಿಯರಗಳ ಪಾತ್ರವೂ ಪ್ರಮುಖವಾಗಿರುತ್ತದೆ
ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನವನ್ನು ಇಂಜಿನಿಯರಿಂಗ್ ದಿನಾಚರಣೆ ಆಚರಣೆ.
ಮುದ್ದೇಬಿಹಾಳ ; ಒಂದು ದೇಶದ ಅಭಿವೃದ್ಧಿಯಲ್ಲಿ ಇಂಜನಿಯರಗಳ ಪಾತ್ರವೂ ಪ್ರಮುಖವಾಗಿರುತ್ತದೆ ಎಂದು ನಿವೃತ್ತ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ, ಜೆಡಿಎಸ್ ಹಿರಿಯ ಮುಖಂಡ, ಕರ್ನಾಟಕ ರಾಜ್ಯ ರೈತ ಹಸಿರು ಸೇನೆಯ ಕಾರ್ಯಾಧ್ಯಕ್ಷ್ಯ ಬಸನಗೌಡ.ಬಿ ಪಾಟೀಲ್ (ಮುರಾಳ) ಹೇಳಿದರು. ಸೋಮುವಾರ ಮುದ್ದೇಬಿಹಾಳ ಪಟ್ಟಣದ ಇಂಜನಿಯರಿಂಗ್ ಸಂಘದ ಕಚೇರಿಯಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡ ಸರ್ ಎಂ ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಇಂಜಿನಿಯರಿಂಗ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಂ ವಿಶ್ವೇಶ್ವರಯ್ಯನವರು 1885 ರಲ್ಲಿ ಮುಂಬಯಿ ಪ್ರಾಂತದ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರಾಗಿ ಈಗ ನಾವು ಯಾವುದನ್ನು ಇನೋವೇಶನ್ ಹೊಸತನದ ಆವಿಷ್ಕಾರ ಎನ್ನುತ್ತೇವೆಯೋ ಅದನ್ನು ಅವರು ಆಗಲೇ ಮಾಡಿದವರು ನೀರು ಸರಬರಾಜು ವಿನ್ಯಾಸ ,ವ್ಯವಸಾಯ, ಒಳಚರಂಡಿ ನಗರಗಳ ಬಡಾವಣೆ ವಿನ್ಯಾಸ ಅದರೊಳಗೆ ನೀರು ಸರಬರಾಜು ಒಳಚರಂಡಿ ರಸ್ತೆ ವಿದ್ಯುತ್ ಮತ್ತು ಸ್ವಯಂಚಾಲಿತ ಆಣೆಕಟ್ಟು ದ್ವಾರ ನಿರ್ಮಾಣ ರೂಪಿಸಿ ಬೌದ್ದಿಕ ಹಕ್ಕು ಪಡೆದುಕೊಂಡ ಹೆಗ್ಗಳಿಕೆ ಸರ್ ಎಂ.ವಿ ಅವರದ್ದು ಎಂದರು.
ಇದೇ ವೇಳೆ ನಿವೃತ್ತಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಬಿ ಬಿ ಪಾಟೀಲ ಮುರಾಳ, ಕೆ ಬಿ ಕೆ ಎನ್ ಎಲ್ ನಿವೃತ್ತ ಇಂಜಿನಿಯರ್ ಎಸ್ ಎ ತೂಂಡಿಹಾಳ ಅವರನ್ನು ಸನ್ಮಾನಿಸಿದರು.
ಈ ವೇಳೆ ಕೆ ಬಿ ಕೆ ಎನ್ ಎಲ್ ನಿವೃತ್ತ ಇಂಜಿನಿಯರ್ ಎಸ್ ಎ ತೂಂಡಿಹಾಳ, ಇಂಜಿನಿಯರ್ ಸಂಘದ ಉಪಾಧ್ಯಕ್ಷ ಅನಿಲ್ ಕುಲಕರ್ಣಿ, ಕಾರ್ಯದರ್ಶಿ ಗುರುರಾಜ ನಾಗೂರ ಮಾತನಾಡಿ ನಾಲ್ಕನೇ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ದಿವಾನರಾಗಿದ್ದ ಎಂ ವಿಶ್ವೇಶ್ವರಯ್ಯ ಕೃಷ್ಣರಾಜ ಸಾಗರ ಆಣೆಕಟ್ಟು ಕಟ್ಟಿದ ದೂರದೃಷ್ಟಿಯುಳ್ಳವರು ಮೈಸೂರು ಸ್ಯಾಂಡಲ್ ಸೋಪ್,ಜೋಗದ ಶರಾವತಿ, ವಿದ್ಯುತ್ ಯೋಜನೆ, ಭದ್ರಾವತಿ ಉಕ್ಕಿನ ಕಾರ್ಖಾನೆ ಮಾಡಿದ್ದಾರೆ ಅವರ ಸಾಧನೆಗೆ ಭಾರತ ರತ್ನ ಸೇರಿದಂತೆ ಅನೇಕ ಶ್ರೇಷ್ಠ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ ಎಂದರು.
ತಾಲೂಕು ಇಂಜಿನಿಯರ್ ಸಂಘದಿಂದ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಬಡರೋಗಿ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಸ್ ಎಂ ಚಳಗೇರಿ,ಕೆ ಎಂ ಢವಳಗಿ,ಆರ್ ಎಸ್ ಕಿತ್ತೂರ,ಎಸ್ ವೈ ಮಾಲಗತ್ತಿ, ಎಂ ಎಂ ಮುದ್ದೇಬಿಹಾಳ,ಎಂ ಎ ಮಕಾನದಾರ,ಪಿ ಎಂ ದೂಟಿಹಾಳ,ಎಂ ಎ ಗುಡ್ನಾಳ,ಎಸ್ ಬಿ ಹಿರೇಮಠ,ಎಂ ಎಂ ಮಿರ್ಜಾ ,ಸಿ ಎಸ್ ನಾಯ್ಕೋಡಿ,ಎಂ ಹೆಚ್ ಗುಬಚಿ,ಉದಯ ಭೋವಿ, ಪ್ರಶಾಂತ ಅಂಬಿಗೇರ, ಗಿರೀಶ ಅಂಬಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಸ್ವಾಗತ ಉಮೇಶ ಬಡಿಗೇರ, ಅಶೋಕ ಸಾಲಿಮಠ, ಸುಪ್ರಿತ್ ಚಳಗೇರಿ ಪರಿಚಯಿಸಿದರು ರಾಮಚಂದ್ರ ಗಜೇಂದ್ರಗಡ ನಿರೂಪಿಸಿ ವಂದಿಸಿದರು.