ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿ
ಇಂಡಿ: ದೇಶದಲ್ಲಿಯ ಮಹಿಳೆಯರ ಪ್ರಗತಿಯೇ ಆ ದೇಶದ ಪ್ರಗತಿಯನ್ನು ಸೂಚಿಸುತ್ತದೆ ಎಂದು ಸಹಾಯಕ ಪ್ರಾಧ್ಯಾಪಕಿ ನೀಲಾಬಾಯಿ. ಆರ್ ಅಭಿಪ್ರಾಯಪಟ್ಟರು.
ಅವರು ಸೋಮವಾರ ಇಂಡಿ ನಗರದ ಜಿ.ಆರ್.ಗಾಂಧಿ ಕಲಾ, ವೈ.ಎ.ಪಾಟೀಲ ವಾಣಿಜ್ಯ ಹಾಗೂ ಎಂ.ಪಿ. ದೋಶಿ ವಿಜ್ಞಾನ ಮಹಿಳಾ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ವಿಶದ್ವ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಹಿಂದಿನ ಸಮಾಜದಲ್ಲಿ ನಾಲ್ಕು ಗೋಡೆಗಳ ಮಧ್ಯದಲ್ಲಿ ಬಾಳಿ ಬದುಕುತಿದ್ದ ಸ್ತ್ರೀ ಇಂದು ಎಲ್ಲ ರಂಗದಲ್ಲಿ ಅತ್ಯುತ್ತಮ ಸಾಧನೆಗೈದಿದ್ದಾಳೆ. ಸಾಧನೆಯ ಶಿಖರ ಏರುವದರಲ್ಲಿ ಯಾವ ವಲಯವು ಹಿಂದೆ ಬಿದ್ದಿಲ್ಲ. ಸೌಟು ಹಿಡಿಯುವ ಕೈ ದೇಶವನ್ನೇ ಆಳುತಿದ್ದಾಳೆ. ರಾಜಕಾರಣ, ಆಥರ್uಟಿಜeಜಿiಟಿeಜಕ, ಸಾಮಾಜಿಕ, ಶೈಕ್ಷಣಿ, ವಿಜ್ಞಾನ, ತಂತ್ರಜ್ಞಾನ, ವ್ಯವಹಾರ ಮುಂತಾದ ರಂಗಗಳಲ್ಲಿ ಪುರುಷರಷ್ಟೇ ಸರಿಸಮಾನಳಾಗಿ ಮುಂದುವರೆದಿದ್ದಾಳೆ. ಪುರುಷ ಪ್ರಧಾನ ಸಮಾಜದಲ್ಲಿ ನೀವು ಉನ್ನತ ಸ್ಥಾನಮಾನ ಪಡೆದುಕೊಳ್ಳಬೇಕಾದರೆ ಅದಕ್ಕೆ ಶಿಕ್ಷಣವೊಂದೇ ಮದ್ದು ಎಂದ ಅವರು ಮಹಿಳೆಯರು ಉತ್ತಮ ಶಿಕ್ಷಣ ಪಡೆದುಕೊಂಡು ಮುಂದೆ ಬನ್ನಿ. ದೇಹದಿಂದ ಅಂಗವಿಕಲತೆ ಹೊಂದಿದ್ದರೂ ಅದನ್ನು ಲೆಕ್ಕಿಸದೆ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ಅಂಗವಿಕಲತೆ ಇರುವುದು ದೇಹಕ್ಕೆ, ಮನಸ್ಸಿಗಲ್ಲ. ಆತ್ಮವಿಶ್ವಾಸ, ಛಲ ಹಾಗೂ ಸತತ ಪ್ರಯತ್ನವಿದ್ದರೆ ಏನಾದರೂ ಸಾಧಿಸಬಹುದು ಎಂದರು. ಶಾಂತೇಶ್ವರ ವಿದ್ಯಾ ಸಂಸ್ಥೆಯ ನಿರ್ದೇಶಕ ವರ್ಧನ ದೋಶಿ, ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ನೀಲಕಂಠಗೌಡ ಪಾಟೀಲ ಮಾತನಾಡಿ, ಹೆಣ್ಣು ಸಮಾಜದ ಕಣ್ಣು, ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ನಿಲ್ಲುವ ಗಟ್ಟಿಗಿತ್ತಿ ಆಕೆ. ಬದುಕಿನ ಎಲ್ಲ ಕಷ್ಟದ ದಿನಗಳನ್ನು ಎದುರಿಸಿ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದ ಆಕೆಯ ಸ್ಥೈರ್ಯದ ವಿವರಣೆಗೆ ಬೇರೆ ಪದಗಳು ಬೇಕಿಲ್ಲ. ಮಗಳಾಗಿ, ಪತ್ನಿಯಾಗಿ, ತಾಯಿಯಾಗಿ, ಸ್ನೇಹಿತೆಯಾಗಿ ಎಲ್ಲಾ ಪಾತ್ರವನ್ನು ತುಂಬುವ ಆಕೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಆಕೆಗೆ ಒಂದು ದಿನ ಮೀಸಲಿದೆ. ಅದುವೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದರು.
ಮಹಿಳಾ ದಿನಾಚರಣೆಯ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಾದ ಹೇರ್ ಸ್ಟೈಲ್, ಮೆಹೇಂದಿ, ರಂಗೋಲಿ, ನೃತ್ಯ, ಹಾಡು, ಫುಡ್ಸ್ಟಾಲ್ ಮತ್ತು ಪ್ಯಾನ್ಸಿ ಮುಂತಾದ ಸ್ಪರ್ಧೆಗಳನ್ನು ಏರ್ಪಡಿಸಿ, ಅದರಲ್ಲಿ ವಿಜೇತರರಿಗೆ ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಐಶ್ವರ್ಯ ಅರಳಿಚಂಡಿ ನಿರೂಪಿಸಿದರು. ಧಾನಮ್ಮ ಪಾಟೀಲ ಪ್ರಾರ್ಥಿಸಿದರು. ಸುರೇಂದ್ರ ಕೆ ಸ್ವಾಗತಿಸಿದರು. ಗಂಗಾ ಮಜಿಗೆ ವಂದಿಸಿದರು.
ಇಂಡಿ: ನಗರದ ಜಿ.ಆರ್.ಗಾಂಧಿ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಪ್ರಾಧ್ಯಾಪಕಿ ನೀಲಾಬಾರಿ. ಆರ್. ಮಾತನಾಡಿದರು



















