ನೂತನ ವ್ಯವಸ್ಥಾಪಕ ಅಶೋಕಕುಮಾರ ಬೋವಿ ಅವರನ್ನು ಆರ್‌ಎಂಎಸ್‌ಎ ಶಾಲೆಯ ಆಡಳಿತ ಮಂಡಳಿ ಸದಸ್ಯರಿಂದ ವ ಗೌರವ ಸನ್ಮಾನ.
ಮುದ್ದೇಬಿಹಾಳ: ಪಟ್ಟಣದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಮುದ್ದೇಬಿಹಾಳ ಘಟಕಕ್ಕೆ ನೂತನ ವ್ಯವಸ್ಥಾಪಕರಾಗಿ ಆಗಮಿಸಿರುವ ಅಶೋಕಕುಮಾರ ಬೋವಿ ಅವರನ್ನು ಆರ್‌ಎಂಎಸ್‌ಎ ಶಾಲೆಯ ಆಡಳಿತ ಮಂಡಳಿಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಸುಧಾರಣೆ ಹಾಗೂ ವಿದ್ಯಾರ್ಥಿಗಳ ಸುರಕ್ಷಿತ ಪ್ರಯಾಣಕ್ಕೆ ಕೆಕೆಆರ್‌ಟಿಸಿ ಮಹತ್ವದ ಪಾತ್ರ ವಹಿಸುತ್ತಿದ್ದು, ನೂತನ ವ್ಯವಸ್ಥಾಪಕರ ನೇತೃತ್ವದಲ್ಲಿ ಘಟಕವು ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯ ಬಂದೇನವಾಜ್ ಕುಮಸಿ,ಎಚ್.ಆರ್. ಬಾಗವಾನ
ಮುಖ್ಯಗುರು ಅನೀಲಕುಮಾರ ರಾಠೋಡ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್, ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಸೇರಿದಂತೆ ಭಾಗವಹಿಸಿದ್ದರು.


















