ಸಂಗೊಳ್ಳಿ ರಾಯಣ್ಣ ಪ್ರತಿಮೆ ಭವ್ಯ ಮೆರವಣಿಗೆ ಬಸವೇಶ್ವರ ವೃತ್ತ ಮಾರ್ಗವಾಗಿ ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ್ ವೃತ್ತದವರಗೆ ಭವ್ಯ ಮೆರವಣಿಗೆ.
ಮುದ್ದೇಬಿಹಾಳ : ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಯ ಅದ್ದೂರಿ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು.
ಈ ವೇಳೆ ಮಾತನಾಡಿದ ತಾಲ್ಲೂಕ ಕುರಬರ ಸಂಘದ ಅಧ್ಯಕ್ಷ ಎಂ.ಎನ್ ಮದರಿ ಬೆಂಗಳೂರು ಮೆಜೆಸ್ಟಿಕ್ ವೃತ್ತದಲ್ಲಿ ಇರುವಂತಹ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಮಾಡಿದ ಶಿಲ್ಪಿಯಿಂದ ಅಂತಹದೆ ಪ್ರತಿಮೆ ಮಾಡಿಸುವ ಸುಲುವಾಗಿ ಮೂರು ವರ್ಷಗಳ ಕಾಯ್ದೆವು ಇದೀಗ ಕೊಲ್ಹಾಪುರದಿಂದ ತರಲಾಗಿದ್ದು ಭವ್ಯ ಮೆರವಣಿಗೆ ಮಾಡಲಾಗುತ್ತಿದೆ ಇನ್ನೂ ಎರಡು ತಿಂಗಳಲ್ಲಿ ವೃತ್ತ ನಿರ್ಮಾಣ ಮಾಡಿ ಪ್ರತಮೆ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದರು.
ಆಲಮಟ್ಟಿ ರಸ್ತೆಯ ಪಲ್ಲವಿ ಟ್ರೆಡರ್ಸ್ ದಿಂದ ಆರಂಭವಾದ ಸಂಗೊಳ್ಳಿ ರಾಯಣ್ಣ ಪ್ರತಿಮೆ ಭವ್ಯ ಮೆರವಣಿಗೆ ಬಸವೇಶ್ವರ ವೃತ್ತ ಮಾರ್ಗವಾಗಿ ರಾಣಿ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತದಿಂದ ಅಂಬೇಡ್ಕರ್ ವೃತ್ತದವರಗೆ ಮಾಡಲಾಯಿತು ಮೆರವಣಿಗೆಯಲ್ಲಿ ಕುದರೆ ಕುಣಿತ , ಗೂಂಬೆ ಕುಣಿತ ಡೂಳ್ಳುಮೇಳದಲ್ಲಿ ಸಡಗರ ಸಂಭ್ರಮದಿಂದ ಪಟ್ಟಣದ ಎಲ್ಲಾ ಸಮಾಜದ ಜನರು ಪಾಲ್ಗೊಂಡು ರಾಯಣ್ಣ ಪ್ರತಿಮೆ ಪುರಪ್ರವೇಶ ಮಾಡಿಕೊಂಡರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ನಿವೃತ್ತ ಡಿವೈಎಸ್ಪಿ ಎಸ್ ಎಸ್ ಹುಲ್ಲೂರ, ಕಾಂಗ್ರೆಸ್ ಮುಖಂಡ ಸಿ.ಬಿ ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಸೋಮನಗೌಡ ಪಾಟೀಲ್ ನಡಹಳ್ಳಿ ,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಬಿ ಕೆ ಬಿರಾದಾರ, ಸಂಗಮ್ಮ ದೇವರಳ್ಳಿ,ಮುತ್ತಣ್ಣ ಹುಗ್ಗಿ,ಸುರೇಶ್ ಹಳಿಮನಿ, ಮುತ್ತಣ್ಣ ಮಸೂತಿ,ಕೃಷ್ಣ ಬೀಳೆಬಾಯಿ,ನಾಗಪ್ಪ ರೂಡಗಿ, ವಾಯ್ ಹೆಚ್ ವಿಜಯಕರ,ಮಲ್ಲು ತಳವಾರ,ಶ್ರೀಕಾಂತ ಚಲವಾದಿ,ಸಂತೋಷ ನಾಯ್ಕೋಡಿ,ಸಂಗಣ್ಣ ಮೇಲಿನಮನಿ, ಸಂಗಣ್ಣ ಬಿಸಲದಿನ್ನಿ,ರವಿ ಜಗಲಿ,ಗಣ್ಯರು, ಯುವಕರು, ಮಹಿಳೆಯರು ಮಕ್ಕಳು ಸೇರಿದಂತೆ,ವಿವಿಧ ಸಮಾಜದ ಮುಖಂಡರು, ಹಾಲುಮತ ಸಮಾಜದ ಬಂಧುಗಳು ಭಾಗವಹಿಸಿದ್ದರು.