ಅಲೆದಾಟ ಬೇಕಿಲ್ಲಾ ಇಂದು ನಾಳೆ ಸುತ್ತಾಟವಿಲ್ಲ.
ಬಂತು ನೋಡಿ ಮನೆ ಬಾಗಿಲಿಗೆ ದಾಖಲೆ:
ನಿಮ್ಮ ದಾಖಲೆ ನಿಮ್ಮ ಹಕ್ಕು:
ಮನೆ ಬಾಗಿಲಿಗೆ ತಲುಪಿಸುವುದು ನಮ್ಮ ಕರ್ತವ್ಯ:
ಲಿಂಗಸೂಗೂರು: ಕಂದಾಯ ಸಚಿವರು ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಆರ್ ಅಶೋಕ ಅವರ ಮಾರ್ಗದರ್ಶನದಲ್ಲಿ ಕೈಗೊಂಡ ಐತಿಹಾಸಿಕ ತೀರ್ಮಾನವೇ ರೈತಾಪಿ ಜನರ ಮನೆ ಬಾಗಿಲಿಗೆ ನಿಮ್ಮ ದಾಖಲೆ ಕಾರ್ಯಕ್ರಮ. ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯನ್ನು ನಾಗರಹಾಳ ಗ್ರಾಮದಲ್ಲಿ ಮನೆ ಮನೆಗೆ ವಾಸಸ್ಥಳ ಮತ್ತು ಜಾತಿ ಆದಾಯ, ಪಹಣಿ ಪ್ರಮಾಣ ಪತ್ರವನ್ನು ಉಚಿತವಾಗಿ ವಿತರಣೆ ಮಾಡಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕಂದಾಯ ನೀರಿಕ್ಷರು, ಗ್ರಾ. ಪಂ. ಸದಸ್ಯರು ಭಾಗವಹಿಸಿದ್ದರು.