ಶಿಕ್ಷಣದಿಂದ ಮಾತ್ರ ದೇಶದ ಭವಿಷ್ಯ ನಿರ್ಮಾಣ
ಇಂಡಿ : ಇಂದು ಪ್ರತಿಯೊಬ್ಬರು ಶಿಕ್ಷಣವನ್ನು ತಮ್ಮ ತಮ್ಮ
ಮಕ್ಕಳನ್ನು ಅಕ್ಷರವಂತರಾಗಿ ಮಾಡಿದಾಗ ಮಾತ್ರ
ದೇಶದ ಹಾಗೂ ಸಮಾಜದ ಪ್ರಗತಿಗೆ ಸಾಧ್ಯ ಎಂದು
ಜೆಡಿ ಎಸ್ ಮುಖಂಡ ಬಿ.ಡಿ.ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು
ಆಂಗ್ಲ ಮಾಧ್ಯಮ ಶಾಲೆಯ 15ನೇಯ ವಾರ್ಷಿಕ
ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಗರದಲ್ಲಿ ಶ್ರೀ ಹಡಪದ ಅಪ್ಪಣ್ಣನವರ ಶಿಕ್ಷಣ
ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ
ಮುಂಚೂಣಿಯಲ್ಲಿದೆ ಎಂದರು.
ಸಾನಿಧ್ಯವನ್ನು ಷ. ಬ್ರ. ಶ್ರೀ ಅಭಿನವ ರಾಚೋಟೇಶ್ವರ ಶ್ರೀಗಳು ಮಾತನಾಡಿ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಅಕ್ಷರ ಜ್ಞಾನದ ಜೊತೆ, ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಸಮಾಜದ ಸ್ವಾಸ್ಥ್ಯಕ್ಕೆ ಶ್ರಮಿಸಬೇಕು ಎಂದರು.
ವೇದಿಕೆಯ ಮೇಲೆ ವೇ.ದಯಾನಂದ ಹಿರೇಮಠ,
ಸಂಸ್ಥೆಯ ಅಧ್ಯಕ್ಷ ಸಂತೋಷ ಗೌಳಿ, ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದರಾಯ ಅಪ್ತಾಗಿರಿ, ಎನ್ ಎಸ್.ಕಟ್ಟಿಮನಿ ,ಆಯ್ಜಿ ಆಳೂರ, ಪಂಡಿತ ಬಿರಾದಾರ, ಮುಖ್ಯ ಗುರುಗಳಾದ ಎ.ಎಸ್. ಬೋರಾಮಣಿ, ಮುಖ್ಯ ಗುರುಮಾತೆಯರಾದ
ಜಯಶ್ರೀ.ಟಿ.ಗೌಡ, ಕುಮಾರಿ ಭವಾನಿ ಗೌಡ, ಶ್ರೀದರ
ಹಿಪ್ಪರಗಿ, ಸಿದ್ದಪ್ಪ ಗುನ್ನಾಪೂರ, ನಿರ್ದೇಶಕರಾದ
ನಟರಾಜ್ ಗೌಳಿ, ಬಸವರಾಜ ನಾವಿ,ಧೂಳಪ ನಾವಿ,
ಶಿವಾನಂದ ನಾವಿ, ನಾರಾಯಣ ರಾಠೋಡ,ಸಾಯಬಣ್ಣ ನಾವಿ ಹಾಗೂ ಶಿಕ್ಷಕರು ಹಾಗೂ ಪೋಷಕರು
ಉಪಸ್ಥಿತರಿದ್ದರು.
ಇಂಡಿ ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ
ಮತ್ತು ಆಂಗ್ಲ ಮಾಧ್ಯಮ ಶಾಲೆಯ 15ನೇಯ
ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಬಿ.ಡಿ.ಪಾಟೀಲ ಮಾತನಾಡಿದರು.