ಬಾರೆ ಹಣ್ಣು ಬೆಳೆದು ಭಾರಿ ಲಾಭಗಳಿಸಿದ ಬಸವನಾಡಿನ ರೈತ!
ವಿಜಯಪುರ : ಬಡವರ ಸೇಬು ಎಂದೇ ಖ್ಯಾತವಾಗಿರುವ ಬಾರೆ ಹಣ್ಣು ಬಸವನಾಡಿನ ರೈತನ ಕೈ ಹಿಡಿದಿದೆ! ನಾಗಠಾಣದ ಹಡಗಲಿ ಗ್ರಾಮದ ಪ್ರಗತಿ ಪರ ರೈತರಾದ ಸಂತೋಷ್ ಶ್ರೀ ಶೈಲ ಹತರಕಿ ಅವರು ತಮ್ಮ 2.5 ಎಕರೆ ಜಮೀನಿನಲ್ಲಿ ಬಾರೆ ಹಣ್ಣು ಬೆಳೆದು ಕೆ.ಜಿ. ಗೆ .ರೂ. 42ರಂತೆ ಮಾರಾಟ ಮಾಡಿ ರೂ.3 ಲಕ್ಷ ಆದಾಯ ಗಳಿಸಿರುವುದಾಗಿ ತಿಳಿಸಿದರು. ಬಾರೆ ಹಣ್ಣಿನ ಜೊತೆಗೆ ತಮ್ಮ ಉಳಿದ ಜಮೀನಿನಲ್ಲಿ ವಾರ್ಷಿಕ ಸುಮಾರು 40-50 ಲಕ್ಷ ಗಳಿಸುತ್ತಿರುವುದಾಗಿ ಹೆಮ್ಮೆಯಿಂದ ನುಡಿದರು.
ಯಶಸ್ವಿಯಾಗಿ ಅನುಷ್ಠಾನಗೊಳಿಸಿರುವ ನಮ್ಮ ನೀರಾವರಿ ಯೋಜನೆಗಳು ಅವರ ಕೃಷಿ ಮತ್ತು ತೋಟಗಾರಿಕೆಗೆ ವರದಾನವಾಗಿರುವುದಾಗಿ ಕೃತಜ್ಞತೆ ವ್ಯಕ್ತಪಡಿಸಿದರು. ತಾವು ಬೆಳೆದಿರುವ ಬಾರೆ ಹಣ್ಣುಗಳನ್ನು ಉಡುಗೊರೆಯಾಗಿ ನೀಡಿದರು. ಸಚಿವ ಎಮ್ ಬಿ ಪಾಟೀಲ


















