ಪೆಟ್ರೋಲ್ ಬೆಂಕಿಯಲ್ಲಿ ಬೆಂದಿದ್ದ ಪ್ರೀಯಕರ ಸಾವು..!
ವಿಜಯಪುರ: ಮುದ್ದೇಬಿಹಾಳದಲ್ಲಿ ಪ್ರಿಯಕರನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಚಿಕಿತ್ಸೆ ಫಲಿಸದೆ ಪ್ರಿಯಕರ ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾನೆ.
ರಾಹುಲ್ ಬಿರಾದಾರ (25) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಪುರಸಭೆ ಮಾಜಿ ಸದಸ್ಯ ರಾವುಜಪ್ಪ ಮದರಿ ಮನೆಯಲ್ಲಿ ಮೇ 26 ರಂದು ನಡೆದಿದ್ದ ಘಟನೆಯಲ್ಲಿ ಪೆಟ್ರೋಲ್ ಎರಚಿ ಕೊಲೆಗೆ ಯತ್ನಿಸಿ, 70% ರಷ್ಟು ಪ್ರಿಯಕರ ಬೆಂದು ಹೋಗಿದ್ದರು. ಇನ್ನು
ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ (25) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ರಾಹುಲ್ ಬಿರಾದಾರ ಹಾಗೂ ಐಶ್ವರ್ಯಾ ಮಧ್ಯೆ ಮೊದಲು ಲವ್ ಆಗಿತ್ತು. ಪ್ರಿಯಕರನ ನಡತೆ ಸರಿಯಿಲ್ಲವೆಂದು ಮದುವೆಗೆ ಐಶ್ವರ್ಯ ನಿರಾಕರಿಸಿದ್ದಳು ಎನ್ನಲಾಗಿತ್ತು. ಪ್ರಿಯಕರ ಮೇ 26 ರಂದು ಯುವತಿಯ ಮನೆಗೆ ಏಕಾಂಗಿಯಾಗಿ ಬಂದಿದ್ದಾಗ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಮುದ್ದೇಬಿಹಾಳ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.