ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!
ಇಂಡಿ :ಪಟ್ಟಣದ ಬಿಜಾಪುರ ರಸ್ತೆಯ ಟಿಪ್ಪುಸುಲ್ತಾನ್ ವೃತ್ತದಲ್ಲಿ ಇಂಡಿ ಯೂತ್ ಕರೇಜ್ ಕಮಿಟಿಯ ವತಿಯಿಂದ ಹಜರತ್ ಟಿಪ್ಪು ಸುಲ್ತಾನ್ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗಿದ್ದು, ಟಿಪ್ಪು ಸುಲ್ತಾನ್ ಧ್ವಜವನ್ನು ಹಾರಿಸಲಾಯಿತು.
ಜಯಂತಿ ಕಾರ್ಯಕ್ರಮದ ಅಂಗವಾಗಿ ರಕ್ತದಾನ ಶಿಬಿರ ಹಾಗೂ ಹಜರತ್ ಟಿಪ್ಪು ಸುಲ್ತಾನ್ ಅವರ ಜೀವನಾಧಾರಿತ ಕ್ವಿಜ್ ಸ್ಪರ್ಧೆ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಫ್ತಿ ಅಬ್ದುರ್ರಹ್ಮಾನ್ ಅರೆಬ್ ಅವರು ಟಿಪ್ಪುಸುಲ್ತಾನ್ ಅವರು ಅಪ್ರತಿಮ ಶೌರ್ಯ ಮತ್ತು ದಾನಶೀಲತೆಯ ಪ್ರತೀಕವಾಗಿದ್ದು, ಅವರಂತ ಮಹಾನ್ ವ್ಯಕ್ತಿತ್ವಕ್ಕೆ ಯಾರೂ ಸಮರಾಗಲು ಸಾಧ್ಯವಿಲ್ಲ ಎಂದು ಹೇಳಿದರು. ಅವರು ಟಿಪ್ಪುಸುಲ್ತಾನ್ ಅವರ ದಾನಶೀಲತೆ, ಧೈರ್ಯ ಮತ್ತು ದೇಶಭಕ್ತಿಯ ಗುಣಗಳನ್ನು ನಮ್ಮ ಮಕ್ಕಳು ಹಾಗೂ ನಾವು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷರಾದ ಲಿಂಬಾಜಿ ರಾಠೋಡ ಮಾತನಾಡಿ ಭಾರತ ದೇಶದ ಪ್ರಥಮ ಸ್ವತಂತ್ರ ಹೋರಾಟಗಾರ ಹಜರತ್ ಟಿಪ್ಪು ಸುಲ್ತಾನ. ನಮ್ಮ ದೇಶದ ಸ್ವತಂತ್ರ ಸಲುವಾಗಿ ಅವರು ತಮ್ಮ ಮಕ್ಕಳಿಗೆ ಬ್ರೀಟಿಷರ ಬಳಿ ಒತ್ತಿಇಟ್ಟು ನಮ್ಮ ದೇಶದ ಸ್ವತಂತ್ರ ಸಲುವಾಗಿ ಹೋರಾಡಿದರು. ಅವರು ನಮ್ಮ ದೇಶದ ಹೆಮ್ಮೆಯ. ಅವರ ಜೀವನ ನಮಗೆ ಪ್ರೇರಣೆಯಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಾವೀದ ಮೋಮಿನ, ಪುರಸಭೆ ಸದಸ್ಯ ಅಯ್ಯುಬ ಬಾಗವಾನ, ಮಹಿಬೂಬ ಅರಬ, ಮುಕ್ತಾರ ಟಾಂಗೆವಾಲೆ, ಅಯ್ಯುಬ ನಾಟಿಕಾರ, ಇಂಡಿ ಯೂತ್ ಕರೇಜ್ ಕಮಿಟಿಯ ಅಧ್ಯಕ್ಷ ಜಾಕೀರ ಮಲಗಾಣ, ಸಮೀರ ಶೇಖ್, ಮುಜಮ್ಮಿಲ್ ಬಾಗವಾನ, ಮುಜಫ್ಫರ ಬಾಗವಾನ, ವಸೀಂ ಖಾಜಿ, ನಿಸಾರ ಬಳ್ಳಾರಿ, ಶೋಕತ್ ಖಾಜಿ, ಫೀರೋಜ್ ಮುಜಾವರ ಸೇರಿದಂತೆ ಅನೇಕ ಯುವಕರು, ನಾಗರಿಕರು ಭಾಗವಹಿಸಿದ್ದರು.