VOJ ನ್ಯೂಸ್ ಡೆಸ್ಕ್: 2021 ನೇ ಸಾಲಿನಲ್ಲಿ ಭಾರತದ ವಾಯು ಮಾಲಿನ್ಯವು ಸಂಪೂರ್ಣ ಹದಗೆಟ್ಟಿದೆ ಎಂದು ಸ್ವಿಸ್ ಸಂಸ್ಥೆಯಾದ IQAir ದತ್ತಾಂಶ ನೀಡಿದೆ. IQAir ಸ್ವಿಸ್ ವಾಯು ಗುಣಮಟ್ಟದ ತಂತ್ರಜ್ಞಾನ ಕಂಪನಿಯು ನೀಡಿರುವ ವರದಿಯ ಪ್ರಕಾರ ಭಾರತದಲ್ಲಿ ಒಟ್ಟಾರೆ ಮಾಲಿನ್ಯದ ಮಟ್ಟವು ಹದಗೆಟ್ಟಿದೆ ಹಾಗೂ ದೆಹಲಿಯು ಅತ್ಯಂತ ಕಲುಷಿತ ರಾಜಧಾನಿಯಾಗಿ ಉಳಿದುಕೊಂಡಿದೆ. ಕಳೆದ ವರ್ಷ ವರ್ಷದಲ್ಲಿ ಭಾರತದ ಒಂದೇ ಒಂದು ದೇಶವು ವಿಶ್ವಆರೋಗ್ಯ ಸಂಸ್ಥೆಯ ಮಾನದಂಡವನ್ನು ಪೂರೈಸಲು ಯಶಸ್ವಿಯಾಗಿಲ್ಲ ಎಂದು ತಿಳಿದುಬಂದಿದೆ. ದೆಹಲಿಯ ವಾಯು ಮಾಲಿನ್ಯವು ಜಾಗತಿಕವಾಗಿ 4 ನೇ ಸ್ಥಾನದಲ್ಲಿದ್ದರೆ, ವಿಶ್ವದ ಅತ್ಯಂತ ಕಲುಷಿತ ಸ್ಥಳವೆಂದರೆ ರಾಜಸ್ಥಾನದ ಭಿವಾಡಿ, ನಂತರ ಉತ್ತರ ಪ್ರದೇಶದ ಗಾಜಿಯಾಬಾದ್ ದೆಹಲಿಯ ಪೂರ್ವ ಗಡಿಯಲ್ಲಿದೆ. ಟಾಪ್ 15 ಅತ್ಯಂತ ಕಲುಷಿತ ನಗರಗಳಲ್ಲಿ ಹತ್ತು ನಗರಗಳು ಭಾರತದಲ್ಲಿವೆ ಮತ್ತು ಹೆಚ್ಚಾಗಿ ರಾಷ್ಟ್ರ ರಾಜಧಾನಿಯ ಸುತ್ತಲಿನ ನಗರಗಳೇ ಆಗಿವೆ.