ಇಂಡಿ : ಜಗತ್ತಿಗೆ ಜೈನ ಧರ್ಮ ನೀಡಿದ ಕೊಡುಗೆ ಅಪಾರ, ಇಂತಹ ತತ್ವ ಸಿದ್ದಾಂತಗಳ ಪಾಲನೆಯಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಪರಮಪೂಜ್ಯ ಆಯೀಕಾ ೧೦೫ ಸುನೀತಿಮತಿ ಮಾತಾಜಿಯವರು ಮಾತನಾಡಿದರು.
ಪಟ್ಟಣದ ಭಗವಾನ ಆದಿನಾಥ ಜೈನ ಮಂದಿರದಲ್ಲಿ ನಡೆದ ದಶಲಕ್ಷಣ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಥಮ ತೀರ್ಥಂಕರರಾದ ಆದಿನಾಥರಿಂದ ಆರಂಭಿಸಿ ಇಂದಿನ ವರೆಗೂ ಮಾನವೀಯ ಮೌಲ್ಯಗಳ ಜೊತೆಗೆ ಅಹಿಂಸೆ, ತ್ಯಾಗದ ಕುರಿತು ಜಗತ್ತಿಗೆ ಮಾರ್ಗದರ್ಶನ ನೀಡಿದ್ದು ಜೈನ ಧರ್ಮ ಭಗವಾನ ಬಾಹುಬಲಿಯ ತ್ಯಾಗ ಜಗತ್ತಿಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಚಂದ್ರಕಾಂತ ಪಂಡಿತರವರು ಮಾತನಾಡಿ ಜೈನ ಧರ್ಮದ ಪ್ರಮುಖ ಘಟ್ಟ ಮೋಕ್ಷ. ಅದು ಆತ್ಮ ಸಾಕ್ಷಾತ್ಕಾರದಿಂದ ದೊರಕಲು ಸಾದ್ಯ. ಬದುಕಿನ ಸರಳ ಸಂದೇಶಗಳನ್ನು ಸಾರುವದಲ್ಲದೆ ಇಲ್ಲಿನ ಪ್ರತಿ ಆಚರಣೆಯೂ ದುಖಃಮಯ ಜೀವನದಿಂದ ಹೊರಬರುವುದಾಗಿದೆ ಎಂದರು.
ದಶ ಲಕ್ಷಣ ಪರ್ವ ನಿಮಿತ್ಯ ಹತ್ತು ದಿನ ನಿರಂತರ ಉಪವಾಸ ಕೈಕೊಂಡ ಶಾಂತಿನಾಥ ಧನಶೆಟ್ಟಿ, ಅಭಿನಂದನ ಕಿರಣಗಿ,ಭರತ ವರ್ಧಮಾನ,ರತ್ನಮಾಲಾ ವರ್ಧಮಾನ, ಸುನಿತಾ ಜೈನ ಇವರಿಗೆ ಸನ್ಮಾನಿಸಲಾಯಿತು. ಬೆಳಗ್ಗೆ ೬ ಗಂಟೆಗೆ ಜಲಾಭೀಷೇಕ,೯ ಗಂಟೆಗೆ ಪಂಚಾಮೃತ ಜಿನಾಭಿಷೇಕ,ನಂತರ ಸಂಜೆ ೫ ಗಂಟೆಗೆ ಸೋಲಾಕಾರಣ,ದಶಲಕ್ಷಣ ಅನಂತನಾಥ ತೀರ್ಥಂಕರ ಭಜನೆ ಮೂಲಕ ಮಾಡಲಾಯಿತು. ಸಮಸ್ತ ಶ್ರಾವಕ ಶ್ರಾವಕಿಯರು ಮೆರವಣೆಗೆ ಮೂಲಕ ಸಾಮಿಕಟ್ಟೆ ಹಾಗೂ ಸಣ್ಣ ಬಸ್ತಿಗೆ ಹೋಗಿ ದೇವದರ್ಶನ ಮಾಡಿ ಪುನೀತರಾದರು.
ಕಾರ್ಯಕ್ರಮದಲ್ಲಿ ಜೈನ ಸಮಾಜದ ಅಧ್ಯಕ್ಷ ಅಜೀತ ಧನಶೆಟ್ಟಿ, ಕಾರ್ಯದರ್ಶಿ ಸನತಕುಮಾರ ಹಳ್ಳಿ, ಚಂದ್ರಕಾಂತ ಶಹಾ,ಚಂದನ ಧನಪಾಲ, ಸನ್ಮಥ ಹಳ್ಳಿ, ಹೀರಾಚಂದ ಹಳ್ಳಿ, ಅನಂತ ಕೋಟಿ, ನೇಮಿನಾಥ ಬೊಂದರ್ಡೆ, ಮಾಣ ಕ ಅಗರಖೇಡ, ಅಶೋಕ ಕಿರಣಗಿ ಮತ್ತಿತರಿದ್ದರು.
ಇಂಡಿ ಪಟ್ಟಣದ ಜೈನ ಮಂದಿರದಲ್ಲಿ ಉಪವಾಸ ಮಾಡಿದವರನ್ನು ಸನ್ಮಾನಿಸಲಾಯಿತು.