ಭೀಮಾತೀರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!
ಇಂಡಿ : ಅಪರಿಚಿತ ವ್ಯಕ್ತಿಯ ಶವವೊಂದು ಭೀಮಾನದಿಯಲ್ಲಿ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಳೆ ಪಡನೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಪ್ಪಾಸಾಹೇಬ್ ಎಂಬುವರ ಜಮೀನ ಬಳಿಯ ಭೀಮಾನದಿಯಲ್ಲಿ ಸುಮಾರು 30-35 ವಯಸ್ಸಿನ ಪುರುಷನ ಶವ ಸಿಕ್ಕಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸ ತನಿಖೆ ಬಳಿಕ ತಿಳಿದುಬರಬೇಕಿದೆ.
ಅಲ್ಲದೇ, ಶವ ಬಲಗೈ ಮೇಲೆ ಮಾರಾಠಿಯಲ್ಲಿ ಬಾಬಾ ಮಮತಾ ಅಕ್ಕಲಕೋಟ ಅಂತಾ ಟ್ಯಾಟೂ ಮತ್ತು ಬಲಗೈಯಲ್ಲಿ ಕೇಸರಿ ಬಣ್ಣದ ಕಾಸಿದಾರ್ ಮತ್ತು ಬಳಗಾಲಿನಲ್ಲಿ ಕಪ್ಪು ಬಣ್ಣದ ಕಾಸಿದಾರ ಕಟ್ಟಿದ್ದು, ಮೈಮೇಲೆ ಹಾಕಲೇಟ್ ಬಣ್ಣದ ಅಂಡರ್ ವಿಯರ್ ಮಾತ್ರ ಇದೆ. ಅದಕ್ಕಾಗಿ ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಸಂಪರ್ಕಿಸಲು ತಿಳಿಸಿದ್ದಾರೆ.



















