ಇಂಡಿ : ವಿಶ್ವಶಾಂತಿಗಾಗಿ ಹಾಗೂ ಲೋಕ ಕಲ್ಯಾಣಕ್ಕಾಗಿ 18 ಕೋಟಿ ಜಪಯಜ್ಞ ಮತ್ತು ಇಷ್ಟಲಿಂಗ ಪೂಜಾ ಕಾರ್ಯಕ್ರಮ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ನಡೆಯಿತು. ರಾಯಚೂರು ಜಿಲ್ಲೆ ದೇವದುರ್ಗ ವೀರಗೋಟ ಅಡವಿಲಿಂಗ ಮಹಾರಾಜ ಪೀಠದ ಪೀಠಾಧಿಪತಿ ಅಡವಿಲಿಂಗ ಮಹಾರಾಜರ ನೇತೃತ್ವದಲ್ಲಿ 18 ಕೋಟಿ ಜಪಯಜ್ಞ ಹಾಗೂ ಇಷ್ಟಲಿಂಗ ಪೂಜೆಯಲ್ಲಿ ಸಾವಿರಾರು ಜನರು ವಿವಿಧ ಮಠಾಧೀಶರು, ಶಾಸಕ ಯಶವಂತರಾಯಗೌಡ ಪಾಟೀಲ್, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.