ದೇವಾಲಯಗಳು ಮನುಷ್ಯನ
ಶ್ರದ್ಧಾಕೇಂದ್ರಗಳು- ಕಾಶಿ ಶ್ರೀಗಳು
ಇಂಡಿ : ದೇವಾಲಯಗಳು ಮನುಷ್ಯನ ಶ್ರದ್ಧಾ ಹಾಗೂ
ನೆಮ್ಮದಿಯ ಕೇಂದ್ರಗಳು ಎಂದು ಶ್ರೀಮದ್ ಕಾಶಿ
ಜ್ಞಾನ ಸಿಂಹಾಸನಾಧಿಶ್ವರ ಡಾ|| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಜಂಗಮವಾಡಿ ಮಠ ಕಾಶಿ ಹೇಳಿದರು.
ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ ಶಿವಯೋಗೀಶ್ವರ
ದೇವಸ್ಥಾನದ ನೂತನ ಭೂಮಿ ಪೂಜಾ ನೇರವೇರಿಸಿ
ಮಾತನಾಡಿದರು. ಮನುಷ್ಯನಿಗೆ ಹಣ ಐಶ್ವರ್ಯ ನೀಡದಿರುವ ಮನಶಾಂತಿಯನ್ನು ದೇವಾಲಯಗಳು ನೀಡುತ್ತಿವೆ ಎಂಬುದರಲ್ಲಿ ಎರಡು ಮಾತಿಲ್ಲ. ದೇವಾಲಯಗಳಲ್ಲಿ ಅರ್ಧ ತಾಸು ಕುಳಿತು ಭಗವಂತನನ್ನು ಧ್ಯಾನ ಮಾಡಿದರೆ ಮನಸ್ಸಿಗೆ ಸಮಾಧಾನ ಸಿಗುತ್ತದೆ ಎಂದರು. ನೊಣವಿಕೆರೆಯ ಡಾ|| ಕರಿವೃಷಭ ದೇಶಿಕೇಂದ್ರ
ಶಿವಯೋಗಿಗಳು ಮಾತನಾಡಿ ನೂತನ ದೇವಾಲಯವನ್ನು ನಿರ್ಮಿಸುತ್ತಿರುವದು ಸೇವಾಕಾರ್ಯ ಎಷ್ಟೂ ಶ್ಲಾಘನೆ ಮಾಡಿದರೂ ಸಾಲದು ಎಂದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರರು,
ಹಿರಯ್ಯ ಮತ್ತು ಚಿಕ್ಕಯ್ಯ ಹಿರೇಪಟ್ಟ ಶ್ರೀಗಳು,
ನಾವದಗಿಯ ಶಿವಯೋಗಿ ಶಿವಾಚಾರ್ಯರರು, ಶ್ರೀ
ಶಿವಯೋಗೀಶ್ವರ ದೇವಾಲಯದ ಸಮಿತಿ ಅಧ್ಯಕ್ಷ
ಸೋಮಯ್ಯ ಚಿಕ್ಕಪಠ , ಮಲ್ಲಿಕಾರ್ಜುನ ಕಿವಡೆ,
ಪುಂಡಲೀಕ ಕರೂರ, ಭೀಮರಾಯ ಗಾಣಿಗೇರ, ಮಲ್ಲನಗೌಡ ಪಾಟೀಲ, ಶಿವಯೋಗಪ್ಪ ನೇದಲಗಿ, ಶಿವಯೋಗಪ್ಪ ಚನಗೊಂಡ,ಧರ್ಮರಾಜ ಚಾಂದಕವಠೆ ಮತ್ತಿತರಿದ್ದರು.
ಇಂಡಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀ
ಶಿವಯೋಗೀಶ್ವರ ದೇವಸ್ಥಾನದ ನೂತನ ಭೂಮಿ
ಪೂಜಾ ನೇರವೇರಿಸಿ ಕಾಶಿ ಶ್ರೀಗಳು ಮಾತನಾಡಿದರು.