ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು-ಶಂಕರ ಕೋಳೆಕರ
ಇಂಡಿ: ನಿತ್ಯ ಮಕ್ಕಳಿಗೆ ಸಂಸ್ಕಾರ, ಜ್ಞಾನ, ಮಾನವೀಯ ಮೌಲ್ಯಗಳನ್ನು ಧಾರೆಯೆರೆಯುವ ಮಾರ್ಗದರ್ಶಕರಾಗಿ ಇರುವ ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದುದು ಎಂದು ತಾಲೂಕ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರ ಕೋಳೆಕರ ಹೇಳಿದರು.
ಅವರು ಪಟ್ಟಣದ ಸರ್ವಜ್ಞ ಕರಿಯರ್ ಅಕಾಡೆಮಿಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡ ನಾಡು, ನುಡಿ, ಜಲ, ಭಾಷೆ, ಸಾಹಿತ್ಯದ ಭಾವನೆಗಳನ್ನು ಮಕ್ಕಳಲ್ಲಿ ಹೆಮ್ಮರವಾಗಿ ಬೆಳಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಎಸ್ ವ್ಹಿ ಹರಳಯ್ಯ, ಒಳ್ಳೆಯ ವಿಚಾರವಂತಿಕೆ, ಹೃದಯವಂತಿಕೆ ಹಾಗೂ ಮಾನವೀಯ ಮೌಲ್ಯಗಳನ್ನು ಎಲ್ಲರೂ ಹೊಂದುವುದು ಅಗತ್ಯವಾಗಿ ಆಗಬೇಕಾಗಿದೆ.
ಜೀವಗಳಿಗೆ ಜೀವನ ನೀಡುವ ಏಕೈಕ ವೃತ್ತಿ ಅದು ಶಿಕ್ಷಕ ವೃತ್ತಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಮುಖ್ಯಸ್ಥ ನಾಗೇಶ ಮಾತನಾಡಿ, ತಾಯಿಯಿಂದ ಉಸಿರು ಬರುತ್ತೆ, ತಂದೆಯಿಂದ ಹೆಸರು ಬರುತ್ತೆ, ಆದರೆ, ಗುರುವಿಂದ ಉಸಿರಿರುವವರೆಗೂ ಹೆಸರು ಬರುವ ವಿದ್ಯೆ ಬರುತ್ತದೆ.ಹಾಗಾಗಿ ಜಗತ್ತಿನಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನವಿದೆ ಎಂದು ಹೇಳಿದರು.
ಜಿಪಿಟಿ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಕಾರಿ, ತಾಲೂಕ ಜಿಪಿಟಿ ಸಂಘದ ಪದಾಧಿಕಾರಿಗಳಾದ ಸೋಮ ಅಂಗಡಿ, ಎಚ್ ಆರ್ ಪೂಜಾರಿ, ಶಶಿ ವಡ್ಡರ, ಪ್ರಭು ನಾದ, ಮಹಾದೇವ ಗಬಸಾವಳಗಿ, ಪ್ರಭು ಕವಟಗಿ, ಸಿದ್ದು ದಾಭೆ, ಸಂಗಮೇಶ ಬಿ ಸಿ, ಸಿದ್ದು ಹೊಸಪೇಟಿ, ಎಚ್ ಸಿ ಇಂಗಳಗಿ, ಶೇಖರ ಬೀರನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಭಾಗೀಯ ಉಪಾಧ್ಯಕ್ಷರಾದ ಎಸ್ ವ್ಹಿ ಹರಳಯ್ಯ ಅವರನ್ನು ತಾಲೂಕ ಜಿಪಿಟಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.