ಅಫಜಲಪುರ: ಕೋವಿಡ್ ಮಹಾಮಾರಿಯಿಂದ 18 ತಿಂಗಳು ಕಲಿಕೆಯಿಂದ ದೂರ ಉಳಿದಿದ್ದ ಶಾಲಾ ಮಕ್ಕಳನ್ನು 2022-23 ನೇ ಸಾಲಿನ ಶೈಕ್ಷಣಿಕ ವರ್ಷ ಕಲಿಕಾ ಚೇತರಿಕೆ ವರ್ಷ ವೆಂದು ಆಚರಿಸಲಾಗುತ್ತಿದ್ದು ಕಲಿಕಾ ಕೊರತೆ ಒಳಗೊಂಡಿರುವ ಮಕ್ಕಳಿಗೆ ವರ್ಷದಾದ್ಯಂತ ಕಲಿಕಾ ಚೇತರಿಕೆ ಮೂಲಕ ಕಲಿಸುವಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಯತ್ನಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್ ಎಸ್ ದೇಶಮುಖ ಹೇಳಿದರು.
ತಾಲೂಕಿನ ಬಿದನೂರ ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಹೂವು ಕೊಡುವ ಮೂಲಕ ಶಾಲಾ ಆರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಈ ವರ್ಷ ಕಲಿಕಾ ಫಲಕಗಳ ಮುಖಾಂತರ ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಿ ಮರೆತಿದ್ದು ಕಲಿಯದೆ ಬಿಟ್ಟಿದ್ದು ಹಾಗೂ ಈ ವರ್ಷ ಕಲಿಯುವ ಕಲಿಕಾ ಫಲಗಳನ್ನು ಒಳಗೊಂಡ ಕಾರ್ಯಕ್ರಮವೇ ಕಲಿಕಾ ಚೇತರಿಕೆಯಾಗಿದೆ ಎಂದು ಹೇಳಿದರು. ಕ್ಷೇತ್ರ ಸಮನ್ವಯಾಧಿಕಾರಿ ಸುಧಾಕರ ನಾಯಕ ಮಾತನಾಡಿ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ. ಶಾಲೆಗಳು ಔಪಚಾರಿಕವಾಗಿ ಪೂರ್ಣಾವಧಿವರೆಗೆ ನಡೆಯದ ಕಾರಣ ಕಲಿಕಾ ಚೇತರಿಕೆ ಕಾರ್ಯಕ್ರಮ ಜಾರಿಗೆ ಬಂದಿದ್ದು ಇದು ಮಕ್ಕಳಲ್ಲಿ ಹೊಸ ಚೈತನ್ಯ ಮೂಡಿಸಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಜ್ಜನ ಸರ್ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ವಿನೋದಕುಮಾರ ಗ್ರಾ, ಪಂ ಅಧ್ಯಕ್ಷ ಅರುಣಕುಮಾರ ಹರಳಯ್ಯ ಮಾಜಿ ತಾ, ಪಂ ಸದಸ್ಯ ಶೆಟ್ಟೆಪ್ಪ ಡೋಂಗ್ರಿ ಗ್ರಾ, ಪಂ ಸದಸ್ಯರಾದ ಅಂಬಾರಾಯ ವರವಿ ಬುದ್ದಿವಂತ ಚಿಕ್ಕಲಗಿ ಶಿವಾನಂದ ಜೋಗೂರ ಮಹಾಂತಪ್ಪ ನಡಗಡ್ಡಿ ಮುಖಂಡರಾದ ರಾಜು ಚಿಕ್ಕಲಗಿ, ಮಡಿವಾಳಪ್ಪ ಗುತ್ತೇದಾರ, ಸಿ ಆರ್ ಪಿ ಆನಂದ ಪ್ರಾಥಮಿಕ ಶಾಲೆ ಮುಖ್ಯ ಗುರು, ರಾಘವಾಚಾರ್ಯ ಜ್ಯೋಶಿ, ವಿಜಯಕುಮಾರ ಸಾಲಿಮಠ ಭಾಗ್ಯಲತಾ ಶಾಸ್ತ್ರಿ,ರವೀಂದ್ರ ಡಿ ರೇವಣಸಿದ್ದ ಕಲಶೆಟ್ಟಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.