ಭಾರತಾಂಭೆಯ ಭಾವಚಿತ್ರ ನೀಡಿ ಶಿಕ್ಷಕರ ದಿನಾಚರಣೆ ಆಚರಿಸಿದ ಎಬಿವಿಪಿ ಕಾರ್ಯಕರ್ತರು.
ಇಂಡಿ : ಸದೃಢ ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಕ ತೆರೆ ಹಿಂದೆಯೇ ನಿಂತು ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇಂದು ಭಾರತ ವೈಜ್ಞಾನಿಕವಾಗಿ, ಆರ್ಥಿಕವಾಗಿ ಜಗತ್ತಿನ ಮುಂದೆ ತಲೆಎತ್ತಿ ನಿಂತಿದೆ ಎಂದರೆ ಅದರ ಹಿಂದೆ ಶಿಕ್ಷಕರ ಪಾತ್ರವಿದೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಸಚಿನ ಧಾನಗೊಂಡ ಮಂಗಳವಾರ ಹೇಳಿದರು.
ಪಟ್ಟಣದಲ್ಲಿ ಎಬಿವಿಪಿ ವಿಧ್ಯಾರ್ಥಿಗಳು ಸರಕಾರಿ ಪದವಿ ಕಾಲೇಜು, ಶಾಂತೇಶ್ವರ ಪದವಿ ಪೂರ್ವ ಕಾಲೇಜು , ಶ್ರೀಮತಿ ಶಾಲನಿ ಮಾಣಿಕಚಂದ ಜೋಷಿ ಮಹಿಳಾ ಕಾಲೇಜು, ಸಿ ವಿ ರಾಮನ್ ಸೈನ್ಸ್ ಕಾಲೇಜು ಹಾಗೂ ಸರಕಾರಿ ಪದವಿ ಮಹಾವಿದ್ಯಾಲಯದ ಮತ್ತು ಜಿ ಆರ್ ಜಿ ಕಲಾ, ವಾಣಿಜ್ಯ ಮಹಾವಿಧ್ಯಾಲಯಕ್ಕೆ ಬೇಟಿ ನೀಡಿದ ಅವರು, ಭಾರತಾಂಭೆಯ ಭಾವಚಿತ್ರ ನೀಡಿ ಶಿಕ್ಷಕರ ಜೊತೆ ಶಿಕ್ಷಕರ ದಿನಾಚರಣೆ ಮಾಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ಉಪಾಧ್ಯಕ್ಷ ಸದಾನಂದ ಈರನಕೇರಿ, ಈರಣ್ಣ ಸಿಂದಗಿ, ಸಮರ್ಥ ಗಾಯಕವಾಡ, ಅಭಿಜಿತ್ ಬಿರಾದಾರ, ವಿಶಾಲ ಶಿಂದೆ, ಸೌಂದರ್ಯ, ದೀಪಾ, ಶಿಲ್ಪಾ, ಸ್ವಪ್ನಾ, ಸಿದ್ದು ನಾಯಕೋಡಿ, ಮಂಜುನಾಥ್ ಅಚ್ಚಗೇರಿ, ಪರಮೇಶ್ವರ ಮುದೋಳ ಹಾಗೂ ಅನೇಕ ವಿಧ್ಯಾರ್ಥಿ ಕಾರ್ಯಕರ್ತರು ಉಪಸ್ಥಿತರಿದ್ದರು.