ರಾಷ್ಟ್ರೀಯ ಜ್ಞಾನಸಿರಿ ಪ್ರಶಸ್ತಿಗೆ ಶಿಕ್ಷಕ ಸಂತೋಷ ಬಂಡೆ ಆಯ್ಕೆ
ಇಂಡಿ: ಶ್ರೀ ಸಿದ್ದೇಶ್ವರ ಕೋಚಿಂಗ್ ಕ್ಲಾಸಸ್ ಹಾಗೂ ಕರ್ನಾಟಕ ನಾಡ ರಕ್ಷಣಾ ವೇದಿಕೆ ವಿಜಯಪುರ ವತಿಯಿಂದ ವಿಶೇಷ ಸಾಧಕರಿಗೆ ಕೊಡಮಾಡುವ ರಾಷ್ಟ್ರೀಯ ಜ್ಞಾನಸಿರಿ ಪ್ರಶಸ್ತಿಗೆ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯ ಇಂಗ್ಲೀಷ್ ಶಿಕ್ಷಕ ಸಂತೋಷ ಬಂಡೆ ಅವರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸುರೇಶ ಜತ್ತಿ ತಿಳಿಸಿದ್ದಾರೆ.
ಇದೇ 28 ರ ಇಳಿಹೊತ್ತು 4.30 ಕ್ಕೆ ವಿಜಯಪುರ ನಗರದಲ್ಲಿ ಜರುಗುವ ‘ಜ್ಞಾನಸಿರಿ ಉತ್ಸವ-2026’ ಸಮಾರಂಭದಲ್ಲಿ ಮನುಗೂಳಿಯ ಸಂಗನಬಸವ ಶಿವಾಚಾರ್ಯರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ ನಿಂಬರಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಸೇರಿದಂತೆ ಅನೇಕ ಗಣ್ಯರು ಶಿಕ್ಷಕ ಸಂತೋಷ ಬಂಡೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


















