ಲಿಂಗಸೂಗೂರು: ಜಿಲ್ಲಾ ಆಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು ಮತ್ತು ಕ್ಷಯರೋಗ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಟಿಬಿ ಸೋಲಿಸಿ ರಾಯಚೂರು ಗೆಲ್ಲಿಸಿ” ಎಂಬ ಅಭಿಯಾನವನ್ನು ತಾಲೂಕಿನ ನಾಗರಹಾಳದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದರ ಅಂಗವಾಗಿ ಇಂದು ನಾಗರಹಾಳ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯಲ್ಲಿ ಕ್ಷಯರೋಗದ ಕುರಿತು ಜಾಗೃತಿ ಮೂಡಿಸಲಾಯಿತು. ಡಾ.ಹನುಮಂತರಾಯ ತಳ್ಳಿಳ್ಳಿ, ತಾಲೂಕಾ ಮೇಲ್ವಿಚರಕರಾದ ದೇವರಾಜ್ ಮಹಾಂತೇಶ್ ಬ್ಯಾಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಚಿಕಿತ್ಸಾ ಮೇಲ್ವಿಚಾರಕರಾದ ದೇವರಾಜ್ sts ರವರು ಕ್ಷಯರೋಗದ ಕುರಿತು ವಿವರಿಸಿ, ನಮ್ಮ ಮನೆಯಿಂದಲೇ ಈ ಅಭಿಯಾನ ಪ್ರಾರಂಭಿಸಬೇಕೆಂದು ಹೇಳಿದರು. ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಣಾಧಿಕಾರಿ, ಸಚಿನ್ ಜಾಧವ್, ಸಿದ್ದರಾಮಯ್ಯ LTO ಮತ್ತು ಶಾಲಾ, ಕಾಲೇಜು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.