ನೀರಿನ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿ ಖಡಕ ಸೂಚನೆ : ಶಾಸಕ ವಾಯ್ ವಿ ಪಾಟೀಲ್
ಇಂಡಿ : ಬೇಸಿಗೆ ಪ್ರಾರಂಭವಾಗಿದ್ದು ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಅಧಿಕಾರಿಗಳು ಎಲ್ಲ ಅಗತ್ಯ ಮುಂಜಾಗೃತೆ ಕ್ರಮಗಳನ್ನು ಕೈಕೊಳ್ಳಬೇಕು ಎಂದು ಶಾಸಕ ಯಶವಂತರಾಯಗೌಡ ಪಾಟೀಲರು
ಹೇಳಿದರು.
ತಾಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಆವರಣದಲ್ಲಿ ನಡೆದ ಕುಡಿಯುವ ನೀರಿನ ಕುರಿತು
ಟಾಸ್ಕ ಫೋರ್ಸ ಸಭೆಯಲ್ಲಿ ಮಾತನಾಡುತ್ತಿದ್ದರು.
ಈಗಾಗಲೇ 50 ಟ್ಯಾಂಕರ ಮೂಲಕ 106 ಟ್ರಿಪ್ ನೀರು
ಪೂರೈಸಲಾಗುತ್ತಿದ್ದು ವಸತಿ ಪ್ರದೇಶದಲ್ಲಿ ತೊಂದರೆ ಆಗದಂತೆ ಮತ್ತು ವಿದ್ಯಾರ್ಥಿಗಳ ವಸತಿ ನಿಲಯಗಳಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಿ.ಎಂದರು.
ಚುನಾವಣೆ ಕಾರ್ಯ ಎಂದು ನೀರಿನ ಪೂರೈಕೆ
ಕುರಿತು ನೀರ್ಲಕ್ಷ ಬೇಡ. ಬರುವ ದಿನಗಳಲ್ಲಿ ಖುದ್ದಾಗಿ ಗ್ರಾ.ಪಂ ಗಳಿಗೆ ತಾಲೂಕಿನ ಎಲ್ಲ ಅಧಿಕಾರಿಗಳ ಜೊತೆ ಭೇಟಿ ನೀಡಿ ಜಜರ ಮಧ್ಯೆ ನೀರಿನ ಸಮಸ್ಯೆ ಕುರಿತು ಚರ್ಚಿಸುತ್ತೇನೆ ಎಂದರು. ಹಂಜಗಿ ಕೆರೆಗೆ ಶೀಘ್ರದಲ್ಲಿ ನೀರು ತುಂಬಲಾಗುವದು. ಇದರಿಂದ 34 ಗ್ರಾಮಗಳಿಗೆ
ಅನುಕೂಲವಾಗಲಿದೆ ಎಂದರು. ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕ್ಷಕ ಅಭಿಯಂತರ ಮನೋಜಕುಮಾರ ಗಡಬಳ್ಳಿ ಮಾತನಾಡಿ ನಾರಾಯಣಪುರ ಜಲಾಶಯದಲ್ಲಿ
ಕುಡಿಯುವ ಕುರಿತು ನೀರಿದ್ದು, ಒಂದು ವಾರ
ಮುಂಚಿತ ತಿಳಿಸಿದರೆ ನೀರು ಬಿಡಲಾಗುವದು
ಎಂದರು.
ಎಸಿ ಅಬೀದ ಗದ್ಯಾಳ ಮಾತನಾಡಿ ಬಹು ಹಳ್ಳಿ
ಕುಡಿಯುವ ನೀರಿನ ಯೋಜನೆ ಅಡಿ ಗ್ರಾಮಗಳಿಗೆ
ನೀರು ಪೂರೈಕೆ ಯಾಗುತ್ತಿದ್ದು ಸಧ್ಯದ ಪರಿಸ್ಥಿತಿಯಲ್ಲಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಇಲ್ಲ ಎಂದರು.
ಸಭೆಯಲ್ಲಿ ತಹಸೀಲ್ದಾರ ಮಂಜುಳಾ ನಾಯಕ,
ಗ್ರಾಮೀಣ ನೀರು ಪೂರೈಕೆಯ ಎಸ್.ಆರ್.ರುದ್ರವಾಡಿ, ಇಒ ಬಾಬು ರಾಠೋಡ,ಕೃಷಿ ಇಲಾಖೆಯ ಮಹಾದೇವಪ್ಪ ಏವೂರ,ತೋಟಗಾರಿಕೆಯ ಎಚ್.ಎಸ್.ಪಾಟೀಲ, ಎಸ್.ಆರ್.ಮೆಂಡೆಗಾರ ,ಡಿ.ಎಸ್.ಪಿ ಜಗದೀಶ
ಮತ್ತಿತರಿದ್ದರು.
ಇಂಡಿ ತಾಲೂಕಿನ ಮರಗೂರದ ಭೀಮಾ ಸಕ್ಕರೆ
ಕಾರ್ಖಾನೆಯಲ್ಲಿ ನಡೆದ ಟಾಸ್ಕ ಫೋರ್ಸ
ಸಭೆಯಲ್ಲಿ ಶಾಸಕ ಯಶವಂತರಾಯಗೌಡ
ಪಾಟೀಲರು ಮಾತನಾಡಿದರು.