ರಾಯಚೂರು: ಜಿಲ್ಲೆಯಲ್ಲಿ ಪೊಲೀಸ್, ಆರೋಗ್ಯ, ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಗ್ಗಿಲ್ಲದೇ ನಡೆಯುತ್ತಿದೆ ಇದಕ್ಕೆ ಆಡಳಿತ ಸರಕಾರದ ಶಾಸಕರು ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರವಿ ಭೋಸರಾಜ್ ನೇರವಾಗಿ ಆರೋಪಿಸಿದ್ದಾರೆ.
ಅವರಿಂದು ನಗರದ ಪತ್ರಿಕಾಭವನದಲ್ಲಿ ಮಾತನಾಡುತ್ತಾ ಜಿಲ್ಲೆಯಲ್ಲಿರುವ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಮತ್ತು ಪೊಲೀಸ ಇಲಾಖೆ ಈ ಮೂರು ಇಲಾಖೆಗಳಲ್ಲಿ ಭ್ರಷ್ಟಾಚಾರ ಎಂಬುದು ತುಂಬಿ ತುಳುಕುತ್ತಿದೆ ಎಂದು ರವಿ ಭೋಸರಾಜ್ ಆರೋಪಿಸಿದ್ದಾರೆ. ಭ್ರಷ್ಟಾಚಾರದ ವಿಚಾರದಲ್ಲಿ ಸರಕಾರ 40 % ಸರಕಾರ, ಜಿಲ್ಲೆಯಲ್ಲೂ ಕೂಡ ಅದೇ ಪರಿಸ್ಥಿತಿ ಇದೆ.
ಮುಖ್ಯವಾಗಿ ಆರೋಗ್ಯ ಇಲಾಖೆಗೆ ಸಂಬಂದಿಸಿದಂತೆ ರಿಮ್ಸ ಮತ್ತು ಓಪೆಕ್ ಆಸ್ಪತ್ರೆಯಲ್ಲಿನ ವೈದ್ಯರೇ ಕರೆ ಮಾಡಿ ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಅಳಲು ತೋಡಿಕೊಂಡಿದ್ದು, ಕನಿಷ್ಠ ದಿನ ನಿತ್ಯ ಬಳಕೆಯ ಔಷದಿಗಳನ್ನೂ ಕೊಡುತ್ತಿಲ್ಲ. ರಿಮ್ಸಾ ಆಸ್ಪತ್ರಗೆ ಹೋದಾಗ ಅಲ್ಲಿ ವೈದ್ಯರೇ ಸಿಗುವುದಿಲ್ಲ, ಇರುವ ವೈದ್ಯರು ಅಲ್ಲಿನ ವೈದ್ಯರು ಪ್ರತಿಯೋಂದು ಔಷದೀಯ ಹೊರಗೆ ಬರೆಯುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ರಿಮ್ಸ ಆಸ್ಪತ್ರೆಯಲ್ಲಿ ಆರ್ಥಿಕವಾಗಿ ಯಾವುದೇ ಸಮಸ್ಯೆಗಳು ಇಲ್ಲ, ಭ್ರಷ್ಟಾಚಾರ ನಡೆಯುತ್ತಿದೆ. ಅಲ್ಲಿ ನಡೆಯುವ ನೇಮಕಾತಿಯಲ್ಲಿ ೮೦ ಲಕ್ಷ ತೆಗೆದುಕೊಳ್ಳುತ್ತಿದ್ದಾರೆ ಎಂದು ನೇರವಾಗಿ ರಿಮ್ಸ ಆಸ್ಪತ್ರೆಯಲ್ಲಿನ ಕರ್ಮಕಾಂಡದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ಇನ್ನು ಲಂಚ ಕೊಟ್ಟು ಬಂದ ವೈದ್ಯರು ತಮ್ಮ ಹಣ ವಾಪಸ್ ಪಡೆಯಲು ಹೊರಗೆ ಇರುವ ಔಷದಿ ಅಂಗಡಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ, ಇದರಿಂದ ವೈದ್ಯರಿಗೆ ಔಷದಿ ಅಂಗಡಿಯವರು ಪರ್ಸೆಂಟೆಜ್ ಮೇಲೆ ಹಣ ಪಡೆದು ಔಷದಿ ಭ್ರಷ್ಟಾಚಾರ ಮಾಡಿ ಬಡ ಜನರಿಂದ ಕಿತ್ತಿಕೊಳ್ಳುತ್ತಿದ್ದಾರೆ ಎಂದ ಅಸಮಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ತಾಂಡವವಾಡುತ್ತಿರುವ ಕೊರೋನ ತಡೆಗಟ್ಟಲು ಚಿಕಿತ್ಸೆ ನೀಡಲು ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಆದರೆ ಅಲ್ಲಿ ಒಂದು ಲೈಟ್ ಇಲ್ಲದೆ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ವೈದ್ಯರ ವಿಚಾರದಲ್ಲಿ ಹೇಳುವವರಿಲ್ಲ ಕೇಳುವವರಿಲ್ಲ. ಅಲ್ಲಿ ಕೆಲಸ ಮಾಡುವ ವಾರಿಯರ್ಸಗಳಿಗೆ ಇದುವರೆಗೆ ಸಂಬಳ ಕೊಡಲು ಆಗಿಲ್ಲ ಎಂದು ಅಸಮಧಾನ ಹೊರ ಹಾಕಿದರು. ಈ ವಿಚಾರ ನೂತನ ಸಚಿವರಿಗೆ ಮಾಹಿತಿ ನೀಡಲಾಗಿತ್ತು ಆದರೆ ನೂತನ ಉಸ್ತುವಾರಿ ಸಚಿವರುಗಳು ಮೂರು ತಿಂಗಳ ಒಳಗಾಗಿ ಸೌಲಭ್ಯ ನೀಡುತ್ತೇವೆ ಎಂದು ಆದೇಶ ಮಾಡಿದ್ದರು ಆದರೂ ಇದುವರೆಗೆ ಆಗಿಲ್ಲ. ಪ್ರಸ್ತುತ ಸ್ವಚ್ಛತೆ ಮಾಡುವ ಕೆಲಸ ಮಾತ್ರ ಆಗುತ್ತಿದೆ ಹೊರತು ಬೇರಾವ ಕೆಲಸ ಆಗುತ್ತಿಲ್ಲ ಎಂದರು.
ಇಂತಹ ಜ್ವಲಂತ ಸಮಸ್ಯಗಳ ಬಗ್ಗೆ ಕ್ರಮಕೈಗೊಳ್ಳಬೇಕಾದರೆ ಕಳೆದ ಒಂದು ವರ್ಷದಲ್ಲಿ ಮೂರು ಜನ ಉಸ್ತುವಾರಿ ಸಚಿವರು ಬದಲಾವಣೆ ಆಗಿದ್ದರೆ ಜೊತೆಗೆ ಮೂರು ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ ಹಾಗಾಗಿ ಒಂದೆ ವಿಚಾರಕ್ಕೆ ಪದೆ ಪದೆ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿ ಜಿಲ್ಲೆಯಲ್ಲಿ ಯಾವುದೇ ಬದಲಾವಣೆ ಇತ್ಯಾರ್ಥ ಆಗುತ್ತಿಲ್ಲ ಎಂದರು.
ಇನ್ನೂ ಕಂದಾಯ ಇಲಾಖೆ ಪರಿಸ್ಥಿತಿ ಹೇಗಾಗಿದೆ ಅಂದರೆ ಅಲ್ಲಿ ಯಾರು ಏನು ಮಾಡುತ್ತಿದ್ದಾರೆ ಗುತ್ತಾಗುತ್ತಿಲ್ಲ. ಅಲ್ಲಿ ಕೂಡ ಭಯಂಕರ ಭ್ರಷ್ಟಾಚಾರ ನಡೆಯುತ್ತಿದೆ. ತಹಶಿಲ್ದಾರರ ನೇಮಕ ಆಗಲು ಹೆಚ್ಚು ಲಂಚ ಕೊಡಬೇಕು. ನಂತರ ಆ ಲಂಚ ಕೊಟ್ಟು ಬಂದ ಅಧಿಕಾರಿಗಳು ಜನರಿಂದಲೆ ಸುಲಿಯುವ ಕೆಲಸ ಮಾಡುತ್ತಾರೆ ಎಂದರು. ಅಲ್ಲದೇ ಬರುವ ಅಧಿಕಾರಿಗಳು ಯಾವ ರೀತಿ ದುಡ್ಡು ಮಾಡಬೇಕು ಅಂತ ಯೋಚಿಸುತ್ತಾರೆ ಹೊರತು ಅಭಿವೃದ್ಧಿ ಮಾಡುವುದಿಲ್ಲ ಎಂದು ಆರೋಪಿಸಿದರು.
ಪೊಲೀಸ್ ಇಲಾಖೆ ಬಗ್ಗೆ ಸ್ವತಃ ಗೃಹ ಸಚಿವರೇ ಭ್ರಷ್ಟಾಚಾರದಲ್ಲಿ ಸಿಬ್ಬಂದಿಗಳು ತೊಡಗಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ಠಾಣೆಗಳನ್ನು ಹರಾಜು ಹಾಕಿದ್ದಾರೆ. PSI ೬೦ ಸಾವಿರ, ಸಿಪಿಐ ೧ ಲಕ್ಷ, ಡಿವೈಎಸ್ಪಿ ೧.೫೦ ಲಕ್ಷ ಹೀಗೆ ಲಂಚ ಕೊಡುವ ಮೂಲಕ ಹರಾಜು ಹಾಕಿಕೊಂಡಿದ್ದಾರೆ ಎಂದರು. ಅಲ್ಲದೆ ಜಿಲ್ಲೆಯಾದ್ಯಂತ ಮಟಕಾ ಇಸ್ಪೀಟು ಕ್ಲಬ್ ಗಳು ತುಂಬಿ ಹೋಗಿವೆ, ಸ್ವತಃ ಮಟಕಾ ಇಸ್ಪೇಟು ನಡೆಸುವವರು ಠಾಣೆಗೆ ಬಂದು ಲಂಚ ಕೊಟ್ಟು ಹೋಗುತ್ತಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಯಾವುದೇ ಅಧಿಕಾರಿ ಇಲಾಖೆಯಲ್ಲಿ ಉತ್ತಮವಾದ ಪೊಜಿಷನ್ ಸಿಗಬೇಕಾದರೆ ಲಂಚ ಕೊಡಲೇ ಬೇಕಾದ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಸಾಕಷ್ಟು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ಮೂರು ಇಲಾಖೆ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇನ್ನೂ ಭ್ರಷ್ಟಾಚಾರ ತಡೆಯಬೇಕಾದ ಆಡಳಿತಾರೂಢ ಸರಕಾರದ ಇಬ್ಬರೂ ಜಲ್ಲೆಯ ರಾಯಚೂರು ನಗರ ಶಾಸಕರಾದ ಡಾ.ಶಿವರಾಜ್ ಪಾಟೀಲ್ ಮತ್ತು ದೇವದುರ್ಗ ಶಾಸಕರಾದ ಶಿವನಗೌಡ ನಾಯಕ್ ಅಧಿಕಾರಿಗಳನ್ನು ಹಣ ಕೊಟ್ಟು ತರುತ್ತಾರೆ ಹಾಗಾಗಿ ಭ್ರಷ್ಟಾಚಾರ ಎನ್ನುವುದನ್ನು ಜಿಲ್ಲೆಯಲ್ಲಿ ಪಾರದರ್ಶಕವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಇದೇ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟವನ್ನು ಮಾಡಲಾಗುತ್ತದೆ, ಈ ಬಗ್ಗೆ ಪಕ್ಷದ ಹಿರಿಯರ ಸಮ್ಮುಖದಲ್ಲಿ ಮಾತನಾಡಿದ್ದು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದರು. ಇನ್ನೂ ಸಚಿವರಿಗೆ ನೀಡಿರುವ ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಇನ್ನೊಮ್ಮೆ ಸಚಿವರು ಜಿಲ್ಲೆಗೆ ಬಂದರೆ ಗೇರಾವ್ ಹಾಕುತ್ತೆವೆ ಎಂದು ಎಚ್ಚರಿಕೆ ನೀಡಿದರು.