ಆದ್ಯತೆಯ ಮೇರೆಗೆ ಟ್ಯಾಂಕರ್ ನೀರು – ಎಸಿ
ಗದ್ಯಾಳ
ಇಂಡಿ : ತಾಲೂಕಿನಲ್ಲಿ ಕಳೆದ ಮಾರ್ಚನಿಂದ ಮೇ 31 ರ
ವರೆಗೆ ಕೆರೆಗಳ ಮೂಲಕ, ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಮತ್ತು ಕೆಲವು ಕಡೆ ಟ್ಯಾಂಕರ ಮೂಲಕ ನೀರು
ಪೂರೈಸಲಾಗುತ್ತಿತ್ತು. ಈಗ ಮೇ 31 ರ ವರೆಗೆ ಮಾತ್ರ ಟ್ಯಾಂಕರ ನೀರು ಪೂರೈಸುತ್ತಿದ್ದು ಬರುವ ದಿನಗಳಲ್ಲಿ ಆದ್ಯತೆಯ ಮೇರೆಗೆ ಅತೀ ಅವಶ್ಯ ವಿದ್ದಲ್ಲಿ ಟ್ಯಾಂಕರ ಮೂಲಕ ನೀರು ಪೂರೈಕೆ ಮಾಡುತ್ತೇವೆ.
ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಅವರು ಪಟ್ಟಣದ ಮಿನಿ ವಿಧಾನಸೌಧದ ಸಭಾಭವನದಲ್ಲಿ ಕುಡಿಯುವ ನೀರಿನ ಕುರಿತು ಟಾಸ್ಕ ಫೋರ್ಸು ಸಮಿತಿ ಮತ್ತು ಪಿಡಿಒ ಅವರ ಸಭೆಯಲ್ಲಿ ಮಾತನಾಡುತ್ತಿದ್ದರು.
ಸಧ್ಯದ ಪರಿಸ್ಥಿತಿಯಲ್ಲಿ ಜೂನ್ 15 ರ ವರೆಗೆ ಸಧ್ಯದ
ಪರಿಸ್ಥಿತಿ ಮುಂದುವರೆಯಲಿದೆ. ಒಮ್ಮೆಲೆ
ಇವತ್ತಿನಿಂದಲೇ ಟ್ಯಾಂಕರ್ ಮೂಲಕ ನೀರು
ಪೂರೈಸುವದು ಬಂದು ಮಾಡುವದಿಲ್ಲ. ಮಳೆಯ
ಅವಲಂಬನೆ ಮತ್ತು ನೀರಿನ ಲಭ್ಯತೆಯ ಆಧಾರದ
ಮೇಲೆ ಜೂನ 15 ರಿಂದ ಬಂದು ಮಾಡಲಾಗುವದು
ಎಂದರು.
ಅದಲ್ಲದೆ ಶಾಲಾ ಕಾಲೇಜು ಮತ್ತು ವಿದ್ಯಾರ್ಥಿಗಳ
ವಸತಿ ನಿಲಯಗಳಿಗೆ ಟ್ಯಾಂಕರ ಮೂಲಕ ನೀರು
ಪೂರೈಕೆ ಮಾಡಲಾಗುವದು ಎಂದರು. ಸಧ್ಯದ ನೀರಿನ ಸರಬರಾಜು ಬೇಡಿಕೆಯ ಮೇರೆಗೆ ಪೂರೈಸಲು ನಮ್ಮಲ್ಲಿಯೇ ವ್ಯವಸ್ಥೆ ಇದೆ. ಮುಂದಿ ದಿನಗಳಲ್ಲಿ ನಾವು ಹೆಚ್ಚಿನ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳ ಸಲಹೆ ಪಡೆದು
ಮಾಡಬೇಕಾಗುತ್ತದೆ ಎಂದರು.
ಪಿಡಿಒ ಸಿ.ಜಿ.ಪಾರೆ ಮಾತನಾಡಿ ಒಮ್ಮೇಲೆ ನೀರು ಪೂರೈಕೆ
ಸ್ಥಗಿತ ಮಾಡಿದರೆ ಗ್ರಾಮಸ್ಥರು ಸಮಸ್ಯೆ ಮಾಡುತ್ತಾರೆ. ಕಾರಣ ಸಧ್ಯದ ಪರಿಸ್ಥಿತಿಯಂತೆ ಜೂನ್ 30 ರ ವರೆಗೆ ಮುಂದು ವರೆಸಲು ಕೇಳಿಕೊಂಡರು.
ತಹಸೀಲ್ದಾರ ಮಂಜುಳಾ ನಾಯಕ, ಇಒ ನೀಲಗಂಗಾ
ಬಬಲಾದ ಮಾತನಾಡಿದರು. ಸಭೆಯಲ್ಲಿ ತೋಟಗಾರಿಕೆ
ಸಹಾಯಕ ನಿರ್ದೇಶಕ ಎಚ್.ಎಸ್.ಪಾಟೀಲ,
ಹೆಸ್ಕಾಂ ಆರ್.ಎಸ್.ಮೆಂಡೆಗಾರ, ಗ್ರಾಮೀಣ ಕುಡಿಯುವ ನೀರಿನ ಎಇಇ ಆರ್.ಎಸ್.ರುದ್ರವಾಡಿ,ಬಿ.ಎಚ್.ಕನ್ನೂರ,
ಮಹಾಂತೇಶ ಹಂಗರಗಿ, ಪಿಡಿಒ ಜಬ್ಬಾರ, ಬಬಲಾದ,
ಎಸ್.ಆರ್.ಮುಜಗೊಂಡ, ವೀಣಾ ಕೊಳುರಗಿ,
ಎಚ್.ಎಚ್.ಗುನ್ನಾಪುರ ಮತ್ತಿತರಿದ್ದರು.
ಇಂಡಿಯ ಮಿನಿ ವಿದಾನಸೌಧದಲ್ಲಿ ನಡೆದ ಟಾಸ್ಕ
ಫೋರ್ಸು ಸಭೆಯಲ್ಲಿ ಅಬೀದ ಗದ್ಯಾಳ
ಮಾತನಾಡಿದರು.