ತಾಂಬಾ ಗ್ರಾಮ ಪಂಚಾಯತ ಸಭಾಂಗಣದಲ್ಲಿ : ವಿಶೇಷ ರಾಜ್ಯೋತ್ಸವದ ಆಚರಣೆ
ಇಂಡಿ : ತಾಲ್ಲೂಕಿನ ತಾಂಬಾ ಗ್ರಾಮ ಪಂಚಾಯತ ಸಭಾಂಗಣದಲ್ಲಿ 69ನೇ ಕರ್ನಾಟಕ ರಾಜ್ಯೋತ್ಸವ ವಿಶೇಷವಾಗಿ ಆಚರಣೆ ಮಾಡಲಾಯಿತು . ಈ ಸಂದರ್ಭದಲ್ಲಿ ಭಾಗವಹಿಸಿ ಮಾತನಾಡಿದ ಕರವೇ ಅಧ್ಯಕ್ಷ ಶಿವರಾಜ್ ಕೆಂಗನಾಳ, ನವೆಂಬರ್ 1 ನೇ ದಿನಾಂಕ ಮಾತ್ರ ರಾಜ್ಯೋತ್ಸವದ ಆಚರಣೆ ಮಾಡಿದರೆ ಸಾಲದು, ಅದು ನಿತ್ಯ ನೀರಂತರ ನಮ್ಮ ನಡೇ ನುಡಿಯಲ್ಲಿ ಅಳವಡಿಸಿ ಕೊಂಡಾಗ ಮಾತ್ರ ನಾವು ನಮ್ಮ ನಾಡಿಗೆ ಗೌರವ ಕೊಟ್ಟಂತಾಗುತ್ತದೆ ಎಂದರು. ಹಾಗೆಯೇ ಈ ಸಲ ಶೇಕಡಾ 60/- ಕನ್ನಡ ನಾಮ ಫಲಕ ಕಡ್ಡಾಯ ಮತ್ತು ಕಡ್ಡಾಯವಾಗಿ ದ್ವಜಾರೋಹಣ ಮಾಡಬೇಕು ಎಂದು ಆದೇಶ ಮಾಡಿದ ಕಾರಣಕ್ಕೆ ಸರಕಾರಕ್ಕೆ ಇದೆ ಸಂದರ್ಭದಲ್ಲಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶ್ರೀಕಾಂತ್ ಹಡಲಸಂಗ, ಗ್ರಾಮ ಪಂಚಾಯತ ಸದಸ್ಯ ರಾಮಚಂದ್ರ ದೊಡಮನಿ, ಹೊನ್ನಪ್ಪ ಕಳ್ಳಿ, ಚಿದಾನಂದ ಗೌಡಗಾವಿ, ಪರಶುರಾಮ ಬಿಸನಾಳ, ರವಿ ನಡಗಡ್ಡಿ, ಅಬ್ದುಲ್ ಧಡೆಡ್, ಮಾಶಿಮ್ ವಾಲಿಕಾರ, ರಾಚಪ್ಪ ಗಳೇದ ಹಾಗೂ ಜಯ ಕರ್ನಾಟಕ ಕರವೇ ಅಧ್ಯಕ್ಷ ಅಲಿಸಾಭ ಧಡೆದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.