ಲಿಂಗಸೂಗೂರು: ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಲಹದ ಬಗ್ಗೆ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಅವರು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಅಧಿಕಾರದಲ್ಲಿಲ್ಲ ಎಂಬ ಕಾರಣಕ್ಕೆ ಗಾಬರಿಯಾಗಬಾರದು. ಬಿಜೆಪಿ ಮತ್ತಿತರ ಪಕ್ಷಗಳು ಬರುತ್ತವೆ ಹೋಗುತ್ತವೆ, ಕಾಂಗ್ರೆಸ್ ಶಾಶ್ವತ ಪಕ್ಷ. ಬಿಜೆಪಿ ಶಾಶ್ವತ ಪಕ್ಷವಾಗಲು ಸಾಧ್ಯವಿಲ್ಲ ಮತ್ತು ನರೇಂದ್ರ ಮೋದಿ ಯುಗದ ನಂತರ ಬಿಜೆಪಿ ಪಕ್ಷ ರಾಜಕೀಯದಲ್ಲಿ ವಿಭಜನೆಯಾಗುತ್ತದೆ ಎಂದಿದ್ದರು.
ಇದಕ್ಕೆ ಪ್ರತ್ಯೂತ್ತರವಾಗಿ ತಾಲೂಕಾ ಮಹಿಳಾ ಮೋರ್ಚಾ ಉಸ್ತುವಾರಿ ಮಾತನಾಡಿ ಈಗಾಗಲೆ ಕಾಂಗ್ರೆಸ್ ಮುಕ್ತ ಭಾರತದತ್ತ ದಾಪುಗಾಲು ಇಡುತ್ತಿರುವ ಕಾಂಗ್ರೆಸ್ ಬಗ್ಗೆ ವೀರಪ್ಪ ಮೊಯ್ಲಿ ಅವರು ಹಗಲು ಕನಸು ಕಾಣುತ್ತಿರುವ ಹಾಗೆ ಕಾಣುತ್ತದೆ. ಸೋನಿಯಾ ಗಾಂಧೀಜಿಯವರ ನಾಯಕತ್ವ ದ ನಂತರ ನಾಯಕರೆ ಇಲ್ಲದ ಪಕ್ಷ ಶಾಶ್ವತವಾಗಿ ನೆಲೆಸುವ ಕನಸು ಕಾಣುತ್ತಿದ್ದಾರೆ. ಮೊಯ್ಲಿ ಯವರು ಅಟಲ್ ಜೀಯವರ ತಳಹದಿ, ಬಿಜೆಪಿ ತತ್ವ ಸಿದ್ದಾಂತ ಮೇಲೆ ನರೇಂದ್ರ ಮೋದಿ ಜೀಯವರ ಮೂಲಕ ಭಾರತದಲ್ಲಿ ಬಿಜೆಪಿ ಬೇರೂರಿದೆ. ಇದನ್ನು ತಪ್ಪಿಸಲು ಕಾಂಗ್ರೆಸ್ ನಿಂದ ಅಸಾಧ್ಯವಾದ ಮಾತು. ಇನ್ನು ಇಪ್ಪತ್ತು ವರ್ಷ ಬಿಜೆಪಿ ತನ್ನ ಅಧಿಕಾರ ಸ್ಥಾಪನೆ ಮಾಡುವಲ್ಲಿ ಯಾವ ಸಂದೇಹವೂ ಇಲ್ಲ. ಭಾರತ ದಲ್ಲಿ ಶಾಶ್ವತ ವಾಗಿ ಬೇರೂರಿದ ಪಕ್ಷ ಬಿಜೆಪಿ ಎಂದು ಲಿಂಗಸ್ಗೂರು ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಹಾಗೂ ಮಹಿಳಾ ಮೋರ್ಚಾ ಉಸ್ತುವಾರಿ ಜ್ಯೋತಿ ಸುಂಕದ ಹೇಳಿದರು.