ಇಂಡಿ : ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್ ಟಿ) ಪಟ್ಟಿಗೆ ಸೇರಿಸಿ ಸಮಾಜ ಕಲ್ಯಾಣ ಇಲಾಖೆ ಶನಿವಾರ ಆದೇಶ ಹೊರಡಿಸಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಆ ಸಾಮಾಜದ ನೂರಾರು ಜನರು ಇಂಡಿ ತಾಲ್ಲೂಕಿನ ತಡವಲಗಾ ಗ್ರಾಮದ ಶ್ರೀ ಬಸವೇಶ್ವರ ವೃತ್ತದ ಬಳಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಮಾತನಾಡಿದ ತಡವಲಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಯಾಣಿ ಗಣವಲಗಾ ಅವರು, ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರುಸುತ್ತೆವೆ ಎಂದು ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ನಾಯಕರು ಹೇಳಿದರು. ಈಗ ಆ ಕೆಲಸ ಮಾಡಿ ತೋರಿಸಿದ್ದಾರೆ. ಇದು ನಮ್ಮ ಸಮುದಾಯಕ್ಕೆ ತುಂಬಾ ಸಂತಸ ತಂದಿದೆ. ಸಮಸ್ತ ತಳವಾರ ಮತ್ತು ಪರಿವಾರ ಸಮಾಜದ ಪರವಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ಹೇಳಿದರು. ಈ ಸಂದರ್ಭದಲ್ಲಿ ನಿಂಗು ತಳವಾರ ಮಾತನಾಡಿ 35 ವರ್ಷದ ತಳವಾರ ಸಮುದಾಯ ಹೋರಾಟದ ಪ್ರತಿಭಟನೆ ಬಂದ ಜಯ. ಶ್ರೀಮಂತ ಜೇವೂರ, ಶ್ರೀಮಂತ ವಾಲಿಕಾರ,ಮಳಸಿದ್ದಪ್ಪ ತಳವಾರ, ಬಸವರಾಜ ತಳವಾರ,ರಮೇಶ್ ಉಕ್ಕಲಿ, ಶರಣಪ್ಪ ಗಿರಣಿ, ರಾಮಣ್ಣ ತಳವಾರ, ಹಣಮಂತ ತಳವಾರ, ಜಟ್ಟೆಪ್ಪ ವಾಲಿಕಾರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು