ರೆಕಾರ್ಡ್ ರೂಂನಲ್ಲಿ ಕಳ್ಳತನ ಮಾಡಿರುವವರ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಿ ತಹಸಿಲ್ದಾರ್ ಗೆ
ಮನವಿ ಸಲ್ಲಿಸಿದ ರೈತ ಸಂಘಟನೆ..
ಹನೂರು: ಪಟ್ಟಣದ ತಹಸಿಲ್ದಾರ್ ಕಛೇರಿಯ ಮುಂಭಾಗದಲ್ಲಿ ಇರುವ ಅಭಿಲೇಖಾಲಯ ಕಛೇರಿಯಲ್ಲಿ ಕಳ್ಳರು ದಾಖಲೆಗಳನ್ನು ಕದ್ದು ಪರ್ಯಾರಿಯಾಗಿದ್ದಾರೆ.
ಸೋಮವಾರ ರಾತ್ರಿ ದಿನಾಂಕ : 09-10-202 ಗಂಡು ಅಪರಿಚಿತ ವ್ಯಕ್ತಿ ದ್ವಿ ಚಕ್ರ ವಾಹನದಲ್ಲಿ ಬಂದು ಪಟ್ಟಣದ ಕಂದಾಯ ಇಲಾಖೆಗೆ ಸೇರಿದ ರೇಕಾರ್ಡ್ ರೂಂ ನ ಬಾಗಿಲು ಹೊಡೆದು ದಾಖಲೆಗಳನ್ನು ಕದ್ದಿದ್ದಾರೆ ಎಂದು ತಹಶೀಲ್ದಾರ್‌ರವರು ಪೊಲೀಸರಿಗೆ ದೂರು ನೀಡಿರುತ್ತಾರೆ. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಹಲವಾರು ಅನುಮಾನಗಳು ಸೃಷ್ಟಿಯಾಗಿದೆ. ತಹಶೀಲ್ದಾರ್ ರವರ ಕಛೇರಿಯಲ್ಲಿ ಭೂಗಳರು, ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ತಾಲ್ಲೂಕು ಕಛೇರಿಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಅಧಿಕಾರಗಳು ಹೊಂದಾಣಿಕೆ ಇರುವುದು ಕಾರಣವಾಗಿದೆ? ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಕಳ್ಳ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದ್ದರೂ ಈವರೆಗೂ ಯಾವುದೇ ರೀತಿ ಬೇಧಿಸಿದ ಇರುವುದರಿಂದ, ತಾವು ಉನ್ನತ ಮಟ್ಟದ ತನಿಖೆ ಮಾಡಿಸಿ ಯಾರು ಭಾಗಿಯಾಗಿದ್ದಾರೆ. ಅವರ ಮೇಲೆ ಕಾನೂನುಕ್ರಮ ಜರುಗಿಸಬೇಕೆಂದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹನೂರು ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಹಸಿಲ್ದಾರ್ ರವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹನೂರು ಅಧ್ಯಕ್ಷರಾದ ಅಮ್ಜದ್ ಖಾನ್, ಕೊಳ್ಳೇಗಾಲ ರೈತ ಸಂಘದ ಅಧ್ಯಕ್ಷ ಗೌಡೇಗೌಡ, ಕಾರ್ಯದರ್ಶಿ ಬಸವರಾಜು, ರಾಜೇಂದ್ರ, ವೆಂಕಟೇಶ್, ಪೆರುಮಾಳ್, ಶೌಕತ್ ಇನ್ನು ಅನೇಕ ಸಂಘಟನೆಯ ಸದಸ್ಯರುಗಳು ಉಪಸ್ಥಿತರಿದ್ದರು.