ಶ್ರೀ.ಷ.ಬ್ರ ರಾಚೋಟೇಶ್ವರ ಶಿವಾಚಾರ್ಯರು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ. ಜೆಡಿಎಸ್ ಬಿ.ಡಿ. ಪಾಟೀಲ ನೇತೃತ್ವದಲ್ಲಿ ಸಾವಿರಾರೂ ರೈತರು ಕೆರೆಗೆ ಪೂಜ್ಯಸಲ್ಲಿಸಿ ಬಾಗಿನ ಅರ್ಪಣೆ ಮಾಡಿದರು. ನಂತರ ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ಬಹುಬೇಡಿಕೆಯ ಕೆರೆ ತುಂಬಿಸುವ ಕನಸು ಇಂದು ನನಸಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಇಂಡಿಯ ಮಿನಿ ವಿಧಾನಸೌಧ ಮುಂದೆ ಧರಣಿ ಸತ್ಯಾಗ್ರಹ, ರಕ್ತದಿಂದ ಸರ್ಕಾರಕ್ಕೆ ಪತ್ರ, ಇಂಡಿ ಬಂದ್ ,ರೈಲು ರುಖೋ, ರಾಷ್ಟ್ರೀಯ ಹೆದ್ದಾರಿ ಬಂದಂತಹ ದೊಡ್ಡ ಮಟ್ಟದ ಹೋರಾಟದ ಮಾಡಿದ್ದೆವೆ. ಜೊತೆಗೆ ಹೋರಾಟದ ಪ್ರತಿ ಫಲವಾಗಿ ಸುಮಾರು 110 ರೈತರ ಮೇಲೆ ಕೇಸ್ ಸರಕಾರ ಕೆಸ್ ಕೂಡಾ ದಾಖಲಿಸಿದೆ. ಇಂದು ಸರಕಾರ ಕಡೆಗೂ ರೈತರ ನೀರು ಕೊಡುವ ಮೂಲಕ ರೈತರ ಮೊಗದಲ್ಲಿ ಸಂತಸ ತಂದಿದೆ, ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು. ಈ ಕೂಡಲೇ
ರೈತರ ಮೇಲೆ ದಾಖಲಿಸಿದ್ದ ಪ್ರಕರಣ ವಾಪಸ್ ಪಡೆಯ ಬೇಕೆಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಸಾನಿಧ್ಯ ವಹಿಸಿ ಮಾತಾನಾಡಿದ ರಾಚೋಟೇಶ್ವರ ಸ್ವಾಮಿಗಳು, ಮಗು ಅತ್ತಾಗ ಮಾತ್ರ ತಾಯಿ ಎದೆಹಾಲು ನೀಡುತ್ತಾಳೆ. ಇದೇ ನಿಟ್ಟಿನಲ್ಲಿ ಬಿ.ಡಿ.ಪಾಟೀಲ ಅವರು ರೈತರೂಂದಿಗೆ ಹೋರಾಟ ಮಾಡಿದ ಪ್ರತಿಫಲವಾಗಿ ತಡವಲಗಾ ಕೆರೆಗೆ ನೀರು ಹರಿಸಲು ಸಾಧ್ಯಾವಾಗಿದೆ. ಈ ಯೋಜನೆಯ ಅನುಷ್ಠಾನಕ್ಕೆ ಕಾರಣಿಕತೃರಾದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಜಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಬಾಬುಸಾಹುಕಾರ ಮೇತ್ರಿ ಮಾತನಾಡಿದ ಅವರು, ಬಿ.ಡಿ. ಪಾಟೀಲರ ನೀರಂತರಹೋರಾಟ ಹಾಗೂ ಎಲ್ಲಾ ಸರ್ಕಾರಗಳು ತಮ್ಮ ತಮ್ಮ ಅವಧಿಯಲ್ಲಿ ಕೈಗೊಂಡ ಕ್ರಮಗಳಿಂದ ಯೋಜನೆ ಜಾರಿಗೆ ಬಂದಿದ್ದು ಸಂತೋಷ ತಂದಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ದರೇಪ್ಪ ತೇಲಿ, ಭೀಮರಾಯ ಪೂಜಾರಿ, ಸಿದ್ದು ಡಂಗಾ, ಮುದುಕಪ್ಪ ಕರಕಟ್ಟಿ, ನಾಗಪ್ಪ ಮಕಣಿ, ಮಳಸಿದ್ದ ಖಸ್ಕಿ, ಕಲ್ಲಪ್ಪ ಖಸ್ಕಿ, ರಮೇಶ್ ಬಡಿಗೇರ, ಮುದುಕಪ್ಪ ಮದರಿ, ಆನಂದ ಹೂಟಗಾರ, ಪೀರಪ್ಪ ಹೂಟಗಾರ, ಶಖೀಲ ಬಳಮ, ಶಾಂತಪ್ಪ ಪೂಜಾರಿ, ಬಸು ಸಾರವಾಡ, ಶಿವರಾಯ ತೇಲಿ, ಜಲೀಲ ದಡೇದ, ರಾಜು ಮುಲ್ಲಾ, ನಿಯಾಝ್ ಅಗರಖೇಡ, ಭಾಷಾ ಮುಲ್ಲಾ, ಶ್ರೀಶೈಲ ಹಿರೇಮಠ, ಎನ್ ಎಸ್ ಕುಂಬಾರ, ಶ್ರೀಶೈಲ ಸುಧಾಮ, ಚಂದಪ್ಪ ಮಿರಗಿ, ಭೀಮು ಬುಕ್ಕಾಣಿ, ಮುದುಕಪ್ಪ ನಾಟೀಕರ, ವಿಠ್ಠಲ ಹಳ್ಳಿ, ದುಂಡು ಬಿರಾದಾರ, ಸೈಯದ್ ಖುರೇಶಿ, ಅಣ್ಣಾರಾಯ ನಾಮದಾರ, ಭೀಮರಾಯ ಪಂಚೋಳಿ, ಸಿದ್ದು ನಾವಿ, ಮುಂತಾದ ರೈತರು ಉಪಸ್ಥಿತರಿದ್ದರು.