ಸಾಲೋಟಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ, ಅಪಾರ ಹಾನಿ
ಸಾಲೋಟಗಿ ಗ್ರಾಮದಲ್ಲಿ ಆಕಸ್ಮಿಕ ಬೆಂಕಿಯಿಂದ ಟ್ಯಾಕ್ಟರ್ ಸಮೇತ 12 ಕುರಿಗಳು ಸುಟ್ಟು ಭಸ್ಮ..! ಅಪಾರ ಪ್ರಮಾಣದ ಹಾನಿ..!
ಇಂಡಿ : ಪತ್ರಾಸ್ ಶೆಡ್ ಮನೆಗೆ ಆಕಸ್ಮಿಕ ಬೆಂಕಿ ತಗುಲಿ 12 ಕುರಿಗಳು, 1 ಟ್ಯಾಕ್ಟರ್, ದ್ರಾಕ್ಷಿ ಬೆಳೆಯ ಔಷಧಿಗಳು ಹಾಗೂ ದವಸ ಧಾನ್ಯಗಳು ಸುಟ್ಟು ಅಪಾರ ಪ್ರಮಾಣ ಹಾನಿಯಾದ ದುರ್ಘಟನೆ ತಾಲ್ಲೂಕಿನ ಸಾಲೋಟಗಿ ಗ್ರಾಮದಲ್ಲಿ ನಡೆದಿದೆ.
ಶನಿವಾರ ಬೆಳಿಗ್ಗೆ 7 ಘಂಟೆಗೆ ತಾಲ್ಲೂಕಿನ ಸಾಲೋಟಗಿ ಗ್ರಾಮದ ಅಪ್ಪಣ್ಣ ಸೋಮಣ್ಣ ದೊಡ್ಡಿ ಎಂಬವರು ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು,ವಾಸಿಸುವ ಸಂಪೂರ್ಣ ಮನೆ ಸುಟ್ಟು ಕರಕಲಾಗಿದೆ.
ಇನ್ನೂ ಘಟನಾ ಸ್ಥಳಕ್ಕೆ ಸಂಬಂದಿಸಿದ ಗ್ರಾಮೀಣ ಪೋಲೀಸರು, ಪಶುವೈದ್ಯ ಇಲಾಖೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅದಲ್ಲದೇ ಸುದ್ದಿ ತಿಳಿದ ನಂತರ ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಬೇಟಿ ನೀಡಿ ಸಾಂತ್ವನ ಹೇಳಿದರು.
ಈ ಬಡ ರೈತ ಸಾಲಸೂಲ ಮಾಡಿ ಟ್ಯಾಕ್ಟರ್ ಖರದಿ ಮಾಡಿದ್ದಾನೆ. ಈ ರೈತನ ನೆರವಿಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಹಾಗೂ ಸರಕಾರ ಧಾವಿಸಬೇಕು. ಸುಮಾರು ₹ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು