ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಜಮೀನಿಗೆ ತೆರಳುವ ರಸ್ತೆ ಹಾಳಾಗಿ ಹೋಗಿದೆ.ವಾಹನದ ಮೂಲಕ ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.ರಸ್ತೆ ದುರಸ್ತಿ ಮಾಡಿ ಕೊಡಿ ಎಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ.ಆದರೆ ರೈತರ ಬೇಡಿಕೆಗೆ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಿಕ್ಕ ಮಣೂರು ಗ್ರಾಮದ ಸಂಗಮ ವಸ್ತಿ ರೈತರು ತಮ್ಮ ಜಮೀನುಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದಾರೆ.ಇತ್ತೀಚೆಗೆ ಸುರಿದ ಅಕಾಲಿಕ ಮಳೆ ರಸ್ತೆ ಹಾಳಾಗಿ ವಾಹನಗಳು ತೆರಳದಂತಾಗಿವೆ.ಇನ್ನೇನು ಈ ಭಾಗದ ರೈತರ ಕಬ್ಬು ಬೆಳೆ ಕಟಾವಿಗೆ ಬಂದಿದ್ದು,ಕಬ್ಬನ್ನು ಟ್ರಾಕ್ಟರ್ ಮೂಲಕ ತರಬೇಕಾಗಿದೆ.ರಸ್ತೆ ಹಾಳಾದ್ದರಿಂದ ರೈತರು ಚಿಂತೆಗೀಡಾಗಿದ್ದಾರೆ.ಇನ್ನು ಪುಟ್ಟ ಪುಟ್ಟ ಮಕ್ಕಳು ಎದ್ದು ಬಿದ್ದು ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಕುರಿತು ಗ್ರಾ.ಪಂ.ತಾ.ಪಂ.ಜಿ.ಪಂ.ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.ಇದೀಗ ಚಿಕ್ಕ ಮಣೂರು ಗ್ರಾಮದ ರೈತರು ಸ್ವಂತ ಹಣದಲ್ಲೇ ರಸ್ತೆ ರಿಪೇರಿಗೆ ಮುಂದಾಗಿದ್ದಾರೆ.