ಸ್ವಾಮಿ ವಿವೇಕಾನಂದ ಜಯಂತಿ; ಪುತ್ಥಳಿಗೆ ಮಾಲಾರ್ಪಣೆ ಮೂಲಕ ಶಾಸಕ ಯತ್ನಾಳರಿಂದ ಗೌರವ ನಮನ
ಭಾರತದ ಆಧ್ಯಾತ್ಮಿಕ ಶಕ್ತಿ ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ವಿವೇಕಾನಂದ
ವಿಜಯಪುರ: ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳರು ಹೇಳಿದರು.
ನಗರದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸೋಮವಾರ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಭಾರತದ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಸ್ವಾವಿ ವಿವೇಕಾನಂದರು ಯುವ ಮನಸ್ಸುಗಳಿಗೆ ಪ್ರೇರಣಾಶಕ್ತಿ. ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಭವ್ಯ ಭಾರತ ನಿರ್ಮಾಣ ಮಾಡೋಣ ಎಂದು ಹೇಳಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್.ಕರಡಿ, ಸದಸ್ಯರುಗಳಾದ ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ರಾಹುಲ್ ಜಾಧವ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ವಿಠ್ಠಲ ಹೊಸಪೇಟ, ಕುಮಾರ ಗಡಗಿ, ಗಿರೀಶ ಬಿರಾದಾರ, ಮಳುಗೌಡ ಪಾಟೀಲ, ಅಶೋಕ ನ್ಯಾಮಗೌಡ, ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ಚಂದ್ರಶೇಖರ ಚೌದರಿ, ಮುಖಂಡರಾದ ರಾಜು ಜಾಧವ, ಅನೀಲ ಸಬರದ, ಸಂತೋಷ ತಳಕೇರಿ, ಬಸವರಾಜ ಲವಗಿ, ಮಧು ಕಲಾದಗಿ, ಮಾನಸಿಂಗ್ ರಾಠೋಡ, ಶಿವಾಜಿ ರಾಠೋಡ ಮತ್ತಿತರರು ಇದ್ದರು.


















