ವಿಶ್ವಕ್ಕೆ ಮಾದರಿಯಾದ ಧರ್ಮ, ಸಂಸ್ಕೃತಿ ಸಮಾಜ ನೀಡಿರುವ ದೇಶ..!
ಇಂಡಿ: ಸ್ವಾಮಿ ವಿವೇಕಾನಂದರು ಚಿಕಾಗೋ ಉಪನ್ಯಾಸದಿಂದ ಭಾರತದ ದೃಷ್ಠಿಕೋನವನ್ನು ವಿಶ್ವದ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದು, ನಮ್ಮ ದೇಶದ ಸಂಸ್ಕøತಿ ಅನಾವರಣಗೊಳಿಸಿದ ಹಿರಿಮೆಯ ಭಾಷಣವಾಗಿತ್ತು ಎಂದು ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಪಿ.ಜಿ.ಕಲ್ಮನಿ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ
ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ
ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ
ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ಭಾಷಣದಿಂದಲೇ ಭಾರತೀಯರ ಕುರಿತು ವಿಶ್ವಕ್ಕೆ ಮಾದರಿಯಾದ ಧರ್ಮ, ಸಂಸ್ಕೃತಿ ಸಮಾಜ ನೀಡಿರುವ ದೇಶ ಎಂಬುದನ್ನು ಸಾರಿತು ಎಂದು ಬಣ್ಣಿಸಿದರು.
ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರನ್ನು
ನಾವು ಆದರ್ಶವಾಗಿ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಿ ಉನ್ನತ ಸಾಧನೆ ಮಾಡಲು ಸಾದ್ಯವಾಗುತ್ತದೆ. ಇಂದಿನ ಯುವಕರು ಯಾವುದೋ ಒಂದು ಸಿನಿಮಾ ನಟ-ನಟಿಯರನ್ನು ಆದರ್ಶವನ್ನಾಗಿ ಇಟ್ಟುಕೊಂಡು ಅವರ ಹಾವ-ಭಾವ, ಉಡುಗೆ-ತೊಡಿಗೆ ಅನುಕರುಣೆ ಮಾಡುತ್ತಿರುವಿರಿ. ಇಂತಹ ಅನುಕರಣೆ ಒಳ್ಳೆಯದಲ್ಲ. ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಕರು ಹೇಳುವ ನಡೆ-ನುಡಿ ಓಳ್ಳೆಯ ಅಭ್ಯಾಸಗಳು ಪಾಠಗಳ ಕಡೆ ಹೆಚ್ಚು ಗಮನ ಹರಿಸಿ ನಿಮ್ಮ ಭವಿಷ್ಯ ಉಜ್ವಲಗೊಳಿಸಿಕೊಳ್ಳಿರಿ ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಮಾತನಾಡಿ, ಸ್ವಾಮಿ
ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ನನ್ನ ಸಹೋದರ-ಸಹೋದರಿಯರೇ
ಎಂದು ಮಾತು ಪ್ರಾರಂಭಿಸಿ ಜಗತ್ತಿನಲ್ಲಿರುವ ಎಲ್ಲ
ಧರ್ಮಗಳು ಸತ್ಯ, ಶಾಂತಿ, ಅಹಿಂಸೆ ಮಂತ್ರ
ಭೊದಿಸುತ್ತಾ ಹಾಗೂ ನಮ್ಮ ಹಿಂದೂ ಧರ್ಮದ
ಸಂಸ್ಕ್ರತಿಯ ಬಗ್ಗೆ 45 ನಿಮಿಷ ಮಾತನಾಡಿದಾಗ ಜಗತ್ತಿಗೇ
ಹಿಂದೂ ಧರ್ಮದ, ಮತ್ತು ಭಾತರೀಯರ ಬ್ರಾತೃತ್ವ
ಭಾವನೆ ಜಗತ್ತಿಗೆ ತೋರಿಸಿದ ಮಹಾನ್ ಪುರುಷರು. ಏಳಿ
ಎದ್ದೇಳಿ ಗುರು ಮುಟ್ಟುವ ತನಕ ನಿಲ್ಲದಿರಿ ಎಂಬ ಅವರ
ವಾಣಿಯಂತೆ ಯುವಕರು ಸಾಗಿದರೆ ಯುವ ಸಮುದಾಯ ಇಂದು ರಾಷ್ಟ್ರೀಯ ಯುವ ದಿನಾಚರಣೆ
ಆಚರಿಸುವುದು ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಆಂಗ್ಲ ಮಾಧ್ಯಮ ಮುಖ್ಯ ಗುರು ಸುನಿಲ್ ವಿ.ಆರ್, ಶಿಕ್ಷಕರಾದ ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ್ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್ ಎಸ್.ಜಿ, ಹ್ಯಾರಿಶ್, ಎಲ್.ಎನ್. ಕರ್ಜಗಿ, ಶಿವಾನಂದ
ಅಂದೇವಾಡಿ, ಜೆ.ಎ. ಬಿರಾದಾರ, ಎಸ್.ಎಮ್. ಭಾಸಗಿ, ಬಿ.ಕೆ. ಉಕ್ಕಲಿ, ಬಿ.ಎಸ್. ನಾಟೀಕಾರ್, ಎಸ್.ಬಿ. ಮಾನೆ, ಎಸ್.ಬಿ. ವಳಸಂಗ, ಅನಿತಾಗೌಡ, ರಾಜೇಶ್ವರಿ ಗೌಡ, ಗಿರಿಜಾ, ರಾಜಶ್ರೀ ಸಂಗಮ್, ಅಶ್ವಿನಿ ಚವ್ಹಾಣ, ಸಾರಾ
ಕೆ, ದೀಪಾಮಾಲಾ, ಜೀನತ್ ಮಧು ಸೇರಿದಂತೆ ಅನೇಕರು
ಇದದರು. ಶಿಕ್ಷಕ ಶಿವಾನಂದ ಕಲ್ಮನಿ ನಿರೂಪಿಸಿ, ವಂದಸಿದರು.
ಇಂಡಿ: ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಪಿ.ಜಿ.ಕಲ್ಮನಿ ಮಾತನಾಡಿದರು..
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ ಟಿ.ಬಿ. ಶಿರಕನಹಳ್ಳಿ, ಕಾರ್ಯದರ್ಶಿ ಪುಂಡಲಿಕ ಕಪಾಲಿ, ಶಿಕ್ಷಕಿ ಶೋಭಾ, ಲಕ್ಷ್ಮೀ
ಗೋರನಾಳ, ರಾಣಿ ಹತ್ತಿ, ಅಶ್ವೀನಿ ರಜಪೂತ್, ಬಸಮ್ಮ ಶಿರಕನಹಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.