ಸ್ವಚ್ಚ ಭಾರತ ಸಂಕಲ್ಪ ಮಾಡೋಣ; ಅಬೀದ್ ಗದ್ಯಾಳ
ಇಂಡಿ : ಸ್ವಚ್ಚತಾ ಕಾರ್ಯ ಸಾಂಕೇತಿಕವಾಗಿರಬಾರದು. ಪ್ರತಿಯೊಬ್ಬರೂ ಕಸವಿಲೇವಾರಿಯನ್ನು ವೈಜ್ಞಾನಿಕವಾಗಿ ಮಾಡಿದಾಗಲೇ ಸ್ವಚ್ಚ ಭಾರತ ಕಲ್ಪನೆ ನಿರ್ಮಾಣ ಮಾಡಬಹುದು ಎಂದು ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪುರಸಭೆ ಆಡಳಿತ ಅಧಿಕಾರಿ – ಯಾಗಿರುವ ಆಬೀದ್ ಗದ್ಯಾಳ ಭಾನುವಾರ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯ ತಾಲೂಕು ಕ್ರೀಡಾಂಗಣದಲ್ಲಿ ಹಾಗೂ ರಸ್ತೆಯ ಉದ್ದಗಲಕ್ಕೂ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು ಜೊತೆಗೆ ಕೈ ಯಲ್ಲಿ ಕಸಬಾರಿಗೆ ಹಿಡಿದು ಸ್ವಚ್ಚತಾಗೊಳಿಸಿ ಮಾತಾನಾಡಿದರು.
ಜನರು ಸ್ವಯಂ ಪ್ರೇರಿತರಾಗಿ ದೇಶಾದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಅನ್ನೋದು ಪ್ರಧಾನಿ ಮೋದಿ ಅವರ ಆಶಯವಾಗಿದೆ. ಅಕ್ಟೋಬರ್ 1 ರಂದು ಬೆಳಗ್ಗೆ 10 ಗಂಟೆಯಿಂದ 11 ಗಂಟೆವರೆಗೆ ದೇಶಾದ್ಯಂತ ಜನರು ಸ್ವಯಂ ಪ್ರೇರಿತರಾಗಿ ಸ್ವಚ್ಛತಾ ಅಭಿಯಾನ ನಡೆಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ
ಅಕ್ಟೋಬರ್ 1 ದೇಶಾದ್ಯಂತ ಶ್ರಮದಾನ ಮಾಡಲು ಪ್ರಧಾನಿ ಮೋದಿ ಕರೆ ನೀಡಿದ್ಧಾರೆ.
ಸ್ವಚ್ಛತೆ ಕಾಪಾಡಬೇಕು ಅನ್ನೋದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಆಶಯ. ಎಷ್ಟೋ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಗಾಂಧೀಜಿಯವರು ಖುದ್ದಾಗಿ ಪೊರಕೆ ಹಿಡಿದ ಪ್ರಸಂಗಗಳು ಇತಿಹಾಸದಲ್ಲಿ ದಾಖಲಾಗಿದೆ. ಮಹಾತ್ಮರ ಈ ಆಶಯದಂತೆಯೇ ಮೋದಿ ಸರ್ಕಾರ ಸ್ವಚ್ಛ ಭಾರತ್ ಮಿಷನ್ ಆರಂಭಿಸಿ ದೇಶಾದ್ಯಂತ ಜಾಗೃತಿ ಮೂಡಿಸುತ್ತಿದೆ. ಇದೀಗ ಅಕ್ಟೋಬರ್ 1 ರಂದು ಮಹಾತ್ಮ ಗಾಂಧಿ ಜನ್ಮ ದಿನಕ್ಕೆ ಒಂದು ದಿನ ಮುನ್ನ ದೇಶಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಕರೆ ನೀಡಿದೆ. ಹಾಗಾಗಿ ಪ್ರತಿಯೊಬ್ಬರು ಶ್ರಮದಾನ ಮಾಡುವ ಮೂಲಕ ಸ್ವಚ್ಛತೆಗೆ ಮಹತ್ವ ನೀಡಬೇಕು. ದೇಹ ದಂಡಿಸುವುದಲ್ಲದೆ ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಂದು ಹೇಳಿದರು.
ಪುರಸಭೆ ಮುಖ್ಯ ಅಧಿಕಾರಿ ಮಹಾಂತೇಶ ಹಂಗರಗಿ, ಪುರಸಭೆ ಸದಸ್ಯ ಬುದ್ದುಗೌಡ ಪಾಟೀಲ, ಶ್ರೀಶೈಲ ಪೂಜಾರಿ, ಕಿರಿಯ ಅರೋಗ್ಯ ನೀರಿಕ್ಷೀಕ, ಎಲ್ ಎಸ್ ಸೋಮನಾಯಕ, ಶೇಖ ಅಜರುದ್ದಿನ, ಶಶಿ ದೇವರ, ಬಸು ಪಾಟೀಲ ಶ್ರೀಶೈಲ ಹಾದಿಮನಿ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.