ರಾಯಚೂರು: ಪ್ರತಿಯೊಬ್ಬರ ಜೀವನದಲ್ಲಿ ಸಮಸ್ಯೆ,ಸವಾಲುಗಳು ಎದುರಾಗುತ್ತವೆ. ಸಮಸ್ಯೆ, ಸವಾಲುಗಳನ್ನು ಮೆಟ್ಟಿ ನಿಲ್ಲುವ ಧೈರ್ಯವನ್ನು ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಹೇಳಿದರು.ಅವರಿಂದು ನಗರದ ಗಾರಿಬ್ ಮೊಮೋರಿಯಲ್ ಗ್ರಂಥಾಲಯದಲ್ಲಿ ಗಾಲಿಬ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಕವಿ ಮಿರ್ಜಾ ಅಸದುಲ್ಲಾ ಖಾನ್ ಗಾಲಿಬ್ ರವರ ೨೨೪ ನೇ ಜನ್ಮ ದಿನಾಚರಣೆ ಹಾಗೂ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳೇ ನಮ್ಮನ್ನು ಗಟ್ಟಿಗೊಳಿಸುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಳು ಒಳ್ಳೆಯ ಅಭ್ಯಾಸಗಳನ್ನು ರೂಪಿಸಿಕೊಳ್ಳಬೇಕು. ಕೆಟ್ಟ ಅಭ್ಯಾಸಗಳಿಗೆ ಅಂಟಿಕೊಂಡರೆ ಅದನ್ನು ತ್ಯೇಜಿಸಲು ಪ್ರಯತ್ನಿಸಬೇಕು ಎಂದರು. ಒಳ್ಳೆಯ ಅಭ್ಯಾಸಗಳಿಂದ ಕೆಟ್ಟ ಅಭ್ಯಾಸ ದೂರ ಹೋಗಬಹುದು. ಸ್ವಯಂ ನಿರ್ಧಾರಗಳು ತೆಗೆದುಕೊಳ್ಳುವವರಾಗಬೇಕು. ಇತರರ ಸಲಹೆ ಪಡೆಯಬೇಕು ಅವರ ನಿರ್ಧಾರಗಳೇ ನಮ್ಮ ನಿರ್ಧಾರ ವಾಗಿರಬಾರದು. ಸಾಧನೆ ಶಿಖರ ಏರಬೇಕೆಂದರೆ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವ ಛಾತಿ ಬೆಳೆಸಿಕೊಳ್ಳಬೇಕು ಎಂದರು.
ಗ್ರಂಥಾಲಯಗಳು ವ್ಯಕಿತ್ವ ರೂಪಿಸುವ ಕೇಂದ್ರಗಳು ವಿದ್ಯಾರ್ಥಿಗಳು ಹೆಚ್ಚಿನ ಸಮಯ ಇಲ್ಲಿ ಕಳೆಯಬೇಕು. ನಿಗದಿತ ಗುರಿ ಇಟ್ಟುಕೊಂಡು ಸಾಧನೆಗೆ ಪ್ರಯತ್ನ ಮಾಡಬೇಕು.ಗಾಲಿಬ್ ಅವರ ಶಾಹಿರಿ ಗಳು ಇಂದಿಗೂ ಫೇಮಸ್ ಅಗಿವೆ. ಅವರು ಉರ್ದು ಭಾಷೆಯ ಬೆಳವಣಿಗೆಗೆ ಮುಖ್ಯ ಪಾತ್ರ ವಹಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗಾಲಿಬ್ ಮೊಮೋರಿಯಲ್ ಟ್ರಸ್ಟ್ ಅಧ್ಯಕ್ಷ ಸೈಯದ್ ತಾರೀಖ್ ಹಸನ್ ರಝ್ವಿ, ಮಲ್ಲಿಕಾರ್ಜುನ,ಸೇರಿದಂತೆ ಇತರರು ಉಪಸ್ಥಿತರಿದ್ದರು.