ಡಿ-10 ರಂದು ಸುವರ್ಣಸೌಧ ಮುತ್ತಿಗೆ, ಮಿಸಲಾತಿ ಹೋರಾಟ ಹತ್ತಿಕ್ಕುವ ಪ್ರಯತ್ನ ಶಾಸಕ, ಸಚಿವರಿಗೆ ಶೋಭೆಯಲ್ಲ..!
ಇಂಡಿ: ಡಿಸೆಂಬರ್ ೧೦ ರಂದು ಲಿಂಗಾಯತ ಪಂಚಮಸಾಲಿ ಸಮಾಜದ ೨ಎ ಮೀಸಲಾತಿಗಾಗಿ ನಡೆಯುತ್ತಿರುವ ಸುವರ್ಣಸೌಧ ಮುತ್ತಿಗೆ ರ್ಯಾಲಿಯನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜದ ಸಚಿವರು ಶಾಸಕರ ಮುಖಾಂತರ ಒತ್ತಡ ಹೇರಿ, ಪ್ರತಿಭಟನೆ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಇಂಡಿ ತಾಲೂಕ ಅಧ್ಯಕ್ಷ ವಿ.ಹೆಚ್. ಬಿರಾದಾರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಅವರು ಹೋರಾಟದ ನೇತೃತ್ವ ವಹಿಸಿದ್ದವರು, ಈಗ ಅಧಿಕಾರ ಸಿಕ್ಕ ಮೇಲೆ ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ, ಸಮಾಜಕ್ಕೆ ಪೂಜ್ಯರೆ ಹೈಕಮಾಂಡ್ ಆಗಿದ್ದು ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇನ್ನಿತರ ಶಾಸಕರು ಸಚಿವರು ಕೂಡಲೇ ಶ್ರೀಗಳಿಗೆ ಕ್ಷಮೆ ಯಾಚಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ನಮ್ಮ ಹೋರಾಟದಿಂದಲೇ ನೀವು ಶಾಸಕರು, ಮಂತ್ರಿ ಆಗಿದ್ದೀರಿ ಎಂಬುದನ್ನು ಮರೆಯಬಾರದು, ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಬಡ ಪಂಚಮಸಾಲಿ ಸಮಾಜದ ಋಣ ತೀರಿಸಲು ಎಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೂ ಸಹ ವಿರೋಧ ಪಕ್ಷಕ್ಕಿಂತಲೂ ಹೆಚ್ಚಿಗೆ ಸದನದಲ್ಲಿ ಧ್ವನಿ ಎತ್ತಿ, ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ಹೋರಾಟದ ಮೂಲಕ ಅಧಿಕಾರ ಪಡೆದುಕೊಂಡ ಕಾಶಪ್ಪನವರ ಹಾಗೂ ಹೆಬ್ಬಾಳ್ಕರ್ ಅವರು ಈಗ ಸರಕಾರದ ಪರವಾಗಿ ನಮ್ಮ ಸಮುದಾಯವನ್ನು ಕಡೆಗಣ ಸುತ್ತಿರುವುದು ಬೇಸರತರಿಸಿದೆ ಎಂದ ಅವರು ಸಮಾಜದ ಬಡ ಮಕ್ಕಳ ಶೈಕ್ಷಣ ಕ ಏಳ್ಗೆ ಸೇರಿದಂತೆ ಬಡವರನ್ನು ಮೇಲೆಬ್ಬಿಸುವ ಸದುದ್ದೇಶದಿಂದ ಶ್ರೀಗಳು ಹೋರಾಟ ನಡೆಸುತ್ತಿದ್ದು ಅವರ ಬೆನ್ನಿಗೆ ಇಡೀ ಪಂಚಮಸಾಲಿ ಜನಾಂಗ ನಿಂತಿದೆ. ರಾಜಕಾರಣ ಗಳು ಶ್ರೀಗಳ ಮನಸ್ಸು ನೋವಿಸಿದರೆ ಸಮಾಜ ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಶಾಸ್ತಿ ಮಾಡಲಿದೆ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ. ಬಿರಾದಾರ ಮಾತನಾಡಿ, ವಕೀಲರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸುವರ್ಣಸೌಧ ಮುತ್ತಿಗೆಗೆ, ಇಂಡಿ ತಾಲೂಕಿನ ವಕೀಲರು ಸೇರಿದಂತೆ ಜಿಲ್ಲೆಯ ವಕೀಲರು ಭಾಗವಹಿಸಲಿದ್ದು ಇಂಡಿ ತಾಲೂಕಿನಿಂದ ಸುಮಾರು ೨೦೦ ಕ್ಕೂ ಅಧಿಕ ಟ್ರ್ಯಾಕ್ಟರ್ ಗಳನ್ನು ತೆಗೆದುಕೊಂಡು ಹೋಗಿ ಹೋರಾಟಕ್ಕೆ ಧುಮುಕುವುದಾಗಿ ತಿಳಿಸಿದರು.
ಸುವರ್ಣ ಸೌಧ ಮುತ್ತಿಗೆ ಸಂದರ್ಭದಲ್ಲಿ ಏನಾದರೂ ಅಡೆ-ತಡೆಗಳಾದರೆ ಅದಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರವೇ ನೇರ ಹೊಣೆ ಆಗಲಿದ್ದು ಸರ್ಕಾರ ಡಿಸೆಂಬರ್ ೯ರ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ನಮ್ಮ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ನ್ಯಾಯವಾದಿಗಳಾದ ಎಸ್.ಆರ್.ಬಿರಾದಾರ, ಡಿ.ಜಿ. ಜ್ಯೋತಗೊಂಡ, ವೀರೇಂದ್ರ ಪಾಟೀಲ, ಜಿ.ಎಸ್. ಪಾಟೀಲ, ಸಮಾಜದ ಮುಖಂಡರಾದ ಸೋಮು ದೇವರ, ಅನಿಲಗೌಡ ಬಿರಾದಾರ, ಬಾಳು ಮುಳಜಿ, ಶ್ರೀಶೈಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.