ಇಂಡಿ : ವಿದ್ಯಾ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ‘ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಪ್ರಯುಕ್ತ ಗಿಡವನ್ನು ಬೆಳೆಸಿ ನಾಡನ್ನು ಉಳಿಸಿ ಎಂಬ ವೇದವಾಕ್ಯದಂತೆ ಇಂದು ಸಸಿ ನೆಡಿಸಲಾಯಿತು. ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಸಂಸ್ಥೆ ಅಧ್ಯಕ್ಷ ತಿಪ್ಪಣ್ಣ ಶಿರಕನಹಳ್ಳಿ ಸಸಿಗೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಪುಂಡಲಿಕ ಕಪಾಲಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೋಭಾ ಹೊರಪೇಟಿ, ಗ್ರಂಥಾಲಯ ಮೇಲ್ವಿಚಾರಕ ಪಿ.ಜೆ. ಮನಮಿ ಗ್ರಾ.ಪಂ ಅಧ್ಯಕ್ಷ ರಂಜಾನ್ ಬಿ.ಗೋಗ್ಯಾಳ, ಶಿಕ್ಷಕಿ ಬಸಮ್ಮಶಿರಕನಹಳ್ಳಿ, ರಾಣಿ ಹತ್ತಿ, ಲಕ್ಷ್ಮಿ ರೂಗಿ ಹಾಗೂ ಬೇಸಿಗೆ ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.