ಇಂಡಿ: 46 ದ್ವೀಚಕ್ರ ಮೋಟಾರು ಸೈಕಲ್ ಮತ್ತು 2 ಅಟೋಗಳನ್ನು ವಶಕ್ಕೆ ಪಡೆಯಲಾಗಿದೆ.1 ನೂರು ವಾಹನಗಳಿಗೆ ಸಂಚಾರಿ ಕ್ರಮದಲ್ಲಿ ದಂಡ ವಿಧಿಸಲಾಗಿದೆ ಎಂದು ಇಂಡಿ ಪೋಲಿಸ್ ಉಪ ವಿಭಾಗ ಅಧಿಕಾರಿ ಶ್ರೀಧರ ದೊಡ್ಡಿ ಹೇಳಿದರು. ನಗರದ ಡಿವಾಯ್ಎಸ್ಪಿ ಕಛೇರಿಯಲ್ಲಿ ಸುದ್ದಗೊಷ್ಠಿ ಉದ್ದೇಶಿಸಿ ಮಾತಾನಾಡಿ ಇವರು, ಕೊರೊನಾ ಮಾಹಾಮಾರಿ ಹಿನ್ನಲೆ ಸರಕಾರ ಕೈ ಗೊಂಡ ನೀತಿ ನಿಯಮಗಳಿಗೆ ಎಲ್ಲರೂ ಬದ್ದರಾಗಿರಬೇಕು. ಸುಖಾ ಸುಮ್ನೆ ಅಲೆದಾಡಿ ನಿಮಗೆ, ನಿಮ್ಮ ಕುಟುಂಬಕ್ಕೆ ಕೊರೊನಾ ರೋಗ ತೆಗೆದುಕೊಂಡು ಹೋಗುತ್ತಿರಿ. ಕೊವಿಡ್ ಎರಡನೇ ಅಲೇ ಮಾನುವ ಸಂಕುಲನಕ್ಕೆ ದೊಡ್ಡ ಸಂಕಷ್ಟ ಸೃಷ್ಟಿ ಮಾಡಿತ್ತು. ಅದಕ್ಕೆ ಈ ಬಾರಿ ಅನಾವಶ್ಯಕ ಹೊರಗೆ ಬಂದು ಅವಕಾಶ ಮಾಡಿಕೊಡಬೇಡಿ ಎಂದರು. ಇಂಡಿ ಮಹಾವೀರ ವೃತ್ತ್ ಮತ್ತು ನಗರದ ಪ್ರಮುಖ ಬಸವೇಶ್ವರ ವೃತ್ ದಲ್ಲಿ ಒನ ವೇ ಕ್ರಿಯೇಟ್ ಮಾಡಿ ಬ್ಯಾರಿಕಡ್ ಅಳವಡಿಸಿ ಪರಿಶೀಲನೆ ಕೂಡಾ ಮಾಡಲಾಗುತ್ತಿದೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಜೊತೆಗೆ ಕೊವಿಡ್ ಲಸಿಕೆ ಹಾಕಿ ಕೊಂಡರೆ ಬಾರಿ ಉತ್ತಮ. ಆದರೆ ಸರಕಾರದ ಆದೇಶಕ್ಕೆ, ಕಾನೂನು ಕ್ರಮಕ್ಕೆ ದಕ್ಕೆ ತಂದರೆ ಯಾವುದೇ ಕಾರಣಕ್ಕೂ ಅವರನ್ನ ಸುಮ್ನೆ ಬಿಡಂಗಿಲ್ಲ,ಅವರ ಮೇಲೆ ಖಂಡಿತವಾಗಿಯೂ ಕಾನೂನು ಕ್ರಮ ಜರಗುತ್ತದೆ ಎಂದು ಹೇಳಿದರು.