ಇಂಡಿಯಲ್ಲಿ ಕಬ್ಬು ಸುಟ್ಟು ಕರಕಲು..!
ಇಂಡಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಬ್ಬರು ರೈತರ ಜಮೀನಿನಲ್ಲಿರುವ ಕಬ್ಬು ಸುಟ್ಟು ಕರಕಲಾದ ಘಟನೆ ತಾಲೂಕಿನ ಶಿರಗೂರ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಯ ಚೆನ್ನಪ್ಪ ಮೇತ್ರಿ ಅವರ ಜಮೀನಿನಲ್ಲಿನ 7 ಎಕರೆ ಹಾಗೂ ಸೋಮಲಿಂಗ ಕಲ್ಲಪ್ಪ ಶಮಶ್ಯಾಪೂರೆ ಅವರ ಜಮೀನಿನಲ್ಲಿ ನ 3 ಎಕರೆ ಗಬ್ಬು ಸುಟ್ಟು ಕರಕಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಮುಂದೆ ಇನ್ನೂ ಆಗುವ ಅನಾಹುತ ತಪ್ಪಿಸಿದ್ದಾರೆ.
ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


















