ಲಚ್ಯಾಣ ಸಾತ್ವಿಕ್ ಯಶಸ್ವಿ ಕಾರ್ಯಾಚಾರಣೆ : ಅಗ್ನಿ ಶಾಮಕ ತಂಡಕ್ಕೆ ಸನ್ಮಾನ ಹಾಗೂ ಪ್ರಶಂಸನೀಯ : ಗೃಹ ಸಚಿವ ಜಿಪರಮೇಶ್ವರ
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಹೊಲದಲ್ಲಿ ೨೦ ಅಡಿ ಆಳದ ತೆರೆದ ಕೊಳವೆ ಬಾವಿಗೆ ಆಕಸ್ಮಿಕವಾಗಿ ಬಿದ್ದ ಎರಡು ವರ್ಷದ ಮಗು ಸಾತ್ವಿಕನನ್ನು ರಕ್ಷಿಸಲು ಸತತ ೨೦ ಗಂಟೆ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿ ತಂಡದಲ್ಲಿ ಇಂಡಿಯ ಅಗ್ನಿಶಾಮಕ ತಂಡದಲ್ಲಿದ್ದ ಆರು ಜನ ಸಿಬ್ಬಂದಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಜಿ.ಪರಮೇಶ್ವರ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಅಗ್ನಿ ಶಾಮಕ ತಂಡದ ಠಾಣಾಧಿಕಾರಿ ಗುರುಪಾದಪ್ಪ ತೇಲಿ, ಸಹಾಯಕ ಠಾಣಾಧಿಕಾರಿ ದೇವದಾನಮ್ಮ, ಮತ್ತು ಮುಬಾರಕ ಇಂಡಿಕರ, ಅನೀಲ ಚವ್ಹಾಣ, ಮಾರು ರಾಠೋಡ, ಮಹಮ್ಮದ ಅಲಿ ಬಂಥನಾಳ ಇವರಿಗೆ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದರು.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ತೋರಿದ ಧೈರ್ಯ ಹಾಗೂ ಸಮಯ ಪ್ರಜ್ಞಾ ಅನುಕರಣಯ.ಈ ಕುರಿತು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಪೋಲಿಸ್ ಮಹಾ ನಿರ್ದೇಶಕ ಹಾಗೂ ಮಹಾ ನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ದಳ ಮತ್ತು ತುರ್ತು ಸೇವೆಗಳ ಕಮಲ ಪಂತ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.
ಇಂಡಿ: ಅಗ್ನಿಶಾಮಕ ದಳದ ಆರು ಜನ ಸಿಬ್ಬಂದಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಜಿ.ಪರಮೇಶ್ವರ ಗೌರವಿಸಿದರು.