ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ
ಮುದ್ದೇಬಿಹಾಳ: ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ಪಟ್ಟಣದ ಜ್ಞಾನ ಭಾರತಿ ವಿದ್ಯಾ ಮಂದಿರ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ದಕ್ಷಿಣ ವಲಯ ಮಟ್ಟದ ಕ್ರೀಡಾ ಕೂಟದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಕ್ರೀಡೆ ನ್ಯಾಯಯುತವಾಗಿರಬೇಕು. ಕ್ರೀಡೆಯಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ತೋರಿಸಬೇಕು. ಆಗಲೇ ಮಗುವಿನ ಮುಂದಿನ ಭವಿಷ್ಯದಲ್ಲಿ ಎದುರಿಸುವ ಔದ್ಯೋಗಿಕ ರಂಗದಲ್ಲಿ ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಪ್ರಭು ಎಸ್.ಕಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕ್ರೀಡಾಕೂಟದಲ್ಲಿ ಬಾಲಕರ ಕಬಡ್ಡಿಯಲ್ಲಿ ಎಸ್.ಎಸ್.ಎಮ್ ಪ್ರೌಢ ಶಾಲೆ ಪ್ರಥಮ, ಬಾಲಕೀಯರ ಕಬಡ್ಡಿಯಲ್ಲಿ ಜ್ಞಾನ ಭಾರತಿ ಪ್ರೌಢ ಶಾಲೆ ಪ್ರಥಮ, ಬಾಲಕರ ಮತ್ತು ಬಾಲಕೀಯರ ಖೋಖೋದಲ್ಲಿ ಸಂತ ಕನಕದಾಸ ಪ್ರೌಢ ಶಾಲೆ ಪ್ರಥಮ, ಬಾಲಕರ ವಾಲಿಬಾಲ್ ನಲ್ಲಿ ಟಿ.ಎಸ್.ಎಸ್. ಪ್ರೌಢ ಶಾಲೆ ಪ್ರಥಮ, ಬಾಲಕೀಯರ ವಾಲಿಬಾಲ್ ನಲ್ಲಿ ಸರಕಾರಿ ಪ್ರೌಢ ಶಾಲೆ ಪ್ರಥಮ ಸ್ಥಾನಗಳಿಸಿ ತಾಲೂಕಾ ಮಟ್ಟಕ್ಕೆ ಆಯ್ಕೆಯಾದರು.
ಈ ಸಂದರ್ಭದಲ್ಲಿ ದೈಹಿಕ ಪರಿವೀಕ್ಷಕ ಬಿ.ವಾಯ್.ಕವಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಮ್.ಎಮ್. ಬೆಳಗಲ್, ಶಿಕ್ಷಣ ಸಂಯೋಜಕಿ ಪರವೀನ ಬಾಳೆಕಾಯಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಎಸ್.ಲಮಾಣಿ, ಮಾದ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ.ಎಸ್. ಹಿರೇಮಠ, ಗೌರವಾಧ್ಯಕ್ಷರಾದ ಎಚ್.ಎನ್.ಇಟಗಿ, ನಿವೃತ್ತ ದೈಹಿಕ ಶಿಕ್ಷಕ ಎಸ್.ಎಲ್.ಗುರವ್ಹ್, ದೈಹಿಕ ಶಿಕ್ಷಕರಾದ ಸಿ.ಎಸ್.ಮನಗುಳಿ, ಎಸ್,ಆರ್,ಸುಲ್ಪಿ, ಬಿ.ಜಿ.ತಾಳಿಕೋಟಿ, ಬಿ.ಎಸ್.ಪಣೇದಕಟ್ಟಿ, ಸಂಸ್ಥೆಯ ಉಪಾಧ್ಯಕ್ಷ ಡಾ. ಎಸ.ಬಿ.ವಡವಡಗಿ, ಪ್ರಾಥಮಿಕ ವಿಭಾಗದ ಮುಖ್ಯ ಗುರುಮಾತೆ ಸರಸ್ವತಿ ಮಡಿವಾಳರ್, ಎಸ್.ಎಸ್.ಹಂಜಗಿ, ಆರ್.ಎಸ್.ಲಮಾಣಿ, ಲಕ್ಷ್ಮೀ ನರಸರಡ್ಡಿ, ಆರ್.ಜೆ.ಸಾಗರ, ಎಸ್.ವಾಯ್.ಹೊಸಮನಿ ಸೇರಿದಂತೆ ಇತರರು ಹಾಜರಿದ್ದರು.
ಮುಖ್ಯಗುರು ರಾಮಚಂದ್ರ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಪಡದಾಳಿ ನಿರೂಪಿಸಿದರು. ದೈಹಿಕ ಶಿಕ್ಷಕ ಬಿ.ಟಿ.ಭಜಂತ್ರಿ ಪ್ರತಿಜ್ಞಾ ವಿಧಿಬೋಧಿಸಿದರು. ಶಿಕ್ಷಕ ಬಿ.ಆರ್.ಬೆಳ್ಳಿಕಟ್ಟಿ ವಂದಿಸಿದರು.