ಲಿಂಗಸೂಗೂರು: ರುಬೀನಾ ಬೇಗಂ ಉಕ್ರೇನ್ ದೇಶದಲ್ಲಿ ಮೆಡಿಕಲ್ ಯುನಿವರ್ಸಿಟಿ ಕಾಲೇಜಿನಲ್ಲಿ ಜನರಲ್ ಮೆಡಿಸಿನ್ ಅಕಾಡೆಮಿಕ್ 2021-22 ನೇ ಸಾಲಿನಲ್ಲಿ ಅದ್ಯಾಯನ ಮಾಡುತ್ತಿರುವ ವಿದ್ಯಾರ್ಥಿನಿ.
ರಷ್ಯಾ ಉಕ್ರೇನ್ ವಾರ್ ಹಿನ್ನಲೆಯಲ್ಲಿ ಉಕ್ರೇನ್ ನಲ್ಲಿ ಸಿಲುಕಿರುವ ತಾಲೂಕಿನ ಹಟ್ಟಿ ಚಿನ್ನದ ಗಣಿಯ ರುಬೀನಾ ಬೇಗಂ ಮನೆಗೆ ಜೆಡಿಎಸ್ ಪಕ್ಷದ ಮುಖಂಡ ಸಿದ್ದು ವಾಯ್ ಬಂಡಿ ಬೇಟಿ ನೀಡಿ ವಿಧ್ಯಾರ್ಥಿನಿಯ ಪೋಷಕರಿಗೆ ದೈರ್ಯದ ನುಡಿಗಳನ್ನು ಹೇಳಿದ್ದಾರೆ.
ನಂತರ ಉಕ್ರೇನ್ ನಲ್ಲಿರುವ ರುಬೀನಾ ಬೆಗಂ ಅವರಿಗೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಮಾತನಾಡಿ ಧೈರ್ಯವನ್ನು ತುಂಬಿ ನೀನು ಧೈರ್ಯವಾಗಿರು ನಾನು ದೇವೇಗೌಡ್ರಿಗೆ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಜೊತೆ ಮಾತನಾಡಿ ಸಾಧ್ಯವಾದರೆ ನಿನಗೂ ಕಾನ್ಫರೆನ್ಸ್ ನಲ್ಲಿ ಮಾತನಾಡಿಸುವೆ. ನಿನ್ನ ಪೊನ್ ನಂ ನಂಬರ್ ಕುಮಾರಣ್ಣ ಅವರಿಗೆ ಕೊಡುತ್ತೇನೆ ಹಾಗೂ ನಿನ್ನನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಬಸವರಾಜ್ ಮಾಕಪೂರ, ಹುಲಗಪ್ಪ ನಾಯಕ್, ಸೋಮಣ್ಣ ನಾಗಲಾಪುರ, ಸದಾನಂದ ಕಟ್ಟಿಮನಿ, ಅನ್ಸರ್ ಆಹ್ಮದ್ ಹಾಗೂ ಹಟ್ಟಿ ಭಾಗದ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.