ಮುದ್ದೇಬಿಹಾಳ: ವಿಜಯಪುರ ಭಾರತ ರತ್ನ ಡಾ. ಬಿ. ಆರ್ .ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೇಲಾಟಗಳ ಕ್ರೀಡಾಕೂಟದಲ್ಲಿ ಮುದ್ದೇಬಿಹಾಳ ತಾಲೂಕಿನ ಸರಕಾರಿ ಆದರ್ಶ ವಿದ್ಯಲಯ ಬಿದರಕುಂದಿಯ ಎಂಟನೇ ತರಗತಿ ವಿದ್ಯಾರ್ಥಿ ರೋಹಿತ್ ರಾಥೋಡ್ ಗುಂಡು ಎಸೆತದಲ್ಲಿ ಪ್ರಥಮ ಬಂದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆಂದು ಶಾಲೆಯ ಮುಖ್ಯ ಗುರುಗಳಾದ ಅನಿಲ್ ಕುಮಾರ್ ರಾಥೋಡ್ ಮುದ್ದೇಬಿಹಾಳ ತಾಲೂಕಿನ ಸರಕಾರಿ ಗ್ರೇಡ್ 1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಮುದ್ದೇಬಿಹಾಳ ಅಧ್ಯಕ್ಷರಾದ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಎ.ಸಿ. ಕೆರೂರ, ಮತ್ತು ಎನ್ .ಎಸ್. ಬಿರಾದಾರ್, ಶಾಲಾ ಸಿಬ್ಬಂದಿ ವರ್ಗ ಎಸ್ .ಡಿ .ಎಂ. ಸಿ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಬಾಗೇವಾಡಿ ತಾಲೂಕಿನ ದೈಹಿಕ ಶಿಕ್ಷಣ ಪರೀಕ್ಷಕರಾದ ಸಿದ್ದರಾಮಪ್ಪ ಅವಟಿ, ಇಂಡಿ ತಾಲೂಕಿನ ದೈಹಿಕ ಶಿಕ್ಷಣ ಪರೀಕ್ಷಕರಾದ ಎಚ್ ಕೆ ಮಾಳಗೊಂಡ, ತಾಳಿಕೋಟಿ ಭಾಗದ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ರಾವುತ ಪೂಜಾರಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯದರ್ಶಿಗಳಾದ ರವಿ ಮರೆಕೋರ ಸೇರಿದಂತೆ ಉಪಸ್ಥಿತರಿದ್ದರು.
© 2025 VOJNews - Powered By Kalahamsa Infotech Private Limited.