ಅಫಜಲಪುರ: ಸುಡು ಬೇಸಿಗೆಯ ಮೊದಲ ಹಬ್ಬ, ಕಡು ಕಾಮಗಳ ಸುಡುವ ಹಬ್ಬ, ರಂಗುಗಳ ಚೆಲ್ಲಿ, ಜೀವಗಳ ತಂಪಾಗಿ ಇಡುವ ಹಬ್ಬ, ಹಿರಿಕಿರಿ ಜೀವಗಳೆಲ್ಲ ಬೆರೆತು, ಜೀವನದ ಜಂಜಾಟಗಳ ಮರೆತು, ಖುಷಿಯ ಬಣ್ಣಗಳೊಡನೆ ಆಡುವ ಹಬ್ಬ.
ಹೌದು ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ವಿದ್ಯಾದರ್ಶನ ಶಾಲೆಯ ವಿದ್ಯಾರ್ಥಿಗಳು ರಂಗಪಂಚಮಿ ಆಚರಣೆ ಮಾಡಿದರು. ಮಕ್ಕಳು ಒಬ್ಬರಿಗೊಬ್ಬರು ಬಗೆ ಬಗೆಯ ಬಣ್ಣಗಳನ್ನು ಎರಚುವ ಮೂಲಕ ಹೋಳಿ ಹಬ್ಬವನ್ನು ಸಂತೋಷದಿಂದ ಆಚರಿಸಿದ್ದಾರೆ.
ನಂತರ ಶಾಲೆಯ ಮುಖ್ಯ ಶಿಕ್ಷಕರಾದ ಅಸ್ಫಾಕ್ ಗಬಸಾವಳಿ ಮಾತನಾಡಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಇವತ್ತು ರಂಗಪಂಚಮಿಯನ್ನ ಬಹಳ ಸಂತೋಷದಿಂದ ಬಣ್ಣ ಆಡಿದರು ವಿಧ್ಯಾರ್ಥಿಗಳ ಮೋಗದಲ್ಲಿ ಸಂತಸ ತಂದಿದೆ ಎಂದರು. ವಿದ್ಯಾರ್ಥಿಗಳಾದ ಆನಂದ ಬಾಕೆ ,ರೋಹಿತ್ ಸಾಯಿಕುಮಾರ್, ಚೇತನ್, ಪ್ರಜ್ವಲ್, ವಿದ್ಯಾ, ಅಂಕಿತಾ, ನವಿನ್, ದೇವಿಂದ್ರ, ವಿಲಾಸ, ವಿಶ್ವನಾಥ ತೋಹಿದ್ ಇಫಾ೯ನ್ ಅಬ್ದುಲ್, ಬಂದೇನವಾಜ, ಮಹ್ಮದ್ ಇದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ: