ಇಂಡಿ : ಹಿಂದುಳಿದ ವರ್ಗದ ಮಕ್ಕಳ ಶ್ರಯೋಭಿವೃದಿಗಾಗಿ, ಶೈಕ್ಷಣಿಕ ಅಭಿವೃದ್ಧಿಗಾಗಿ, ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸರಕಾರ ಅತಿ ಹೆಚ್ಚು ಅನುದಾನ ಬಿಡುಗಡೆಗೊಳಿಸಿ ವಸತಿ ನಿಲಯಗಳನ್ನು ರೂಪಿಸುವ ಜೊತೆಗೆ ಸಿಬ್ಬಂದಿಗಳನ್ನ ಕೂಡಾ ನೇಮಕ ಮಾಡಿರುತ್ತಾರೆ.
ಗ್ರಾಮೀಣ ಭಾಗದ ಹಿಂದುಳಿದ ಮಕ್ಕಳು ಬಡತನದಿಂದಾಗಿ ಶಿಕ್ಷಣದಿಂದ ವಂಚಿತರಾಗಬಾರದು. ಎಷ್ಟೋ ಕುಟುಂಬ ಬಡತನದಿಂದ ಗುಳೆ ಹೋಗುತ್ತಾರೆ. ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತಕೊಂಡು ಸಮಾಜ ಮತ್ತು ದೇಶದ್ರೋಹದ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಮಾರಕವಾಗುವ ಸಾದ್ಯತೆ ಕೂಡಾ ಹೆಚ್ಚು. ಅದಕ್ಕಾಗಿ ಪ್ರತಿಯೊಬ್ಬರಿಗೆ ಶಿಕ್ಷಣ ಕೊಡಲು ಸರಕಾರ ಬದ್ದವಾಗಿದೆ ಮತ್ತು ಅದರಂತೆ ಪ್ರಯತ್ನಸುತ್ತಿದೆ. ಆದರೆ ಈ ವಸತಿಯ ನಿಲಯವೇ ಭಿನ್ನವಾಗಿದೆ.
ಹೌದು ಈ ವಸತಿ ನಿಲಯದಲ್ಲಿ ನೂರಾರು ವಿದ್ಯಾರ್ಥಿಗಳಿದ್ದಾರೆ. ಅಲ್ಲಿ ರಾತ್ರಿ ವೇಳೆ ಗದ್ದಲದ ವಾತಾರಣ ನಿರ್ಮಾಣವಾಗುತ್ತದೆ. ಇದರಿಂದಾಗಿ ಅಕ್ಕ ಪಕ್ಕದ ನಿವಾಸಿಗಳ ನೆಮ್ಮದಿ ಹಾಳಾಗಿದೆ. ಇತ್ತ ಸಂಬಂಧ ಪಟ್ಟ ಅಧಿಕಾರಿಗಳು ಮೌನ ವಹಿಸಿರುವದಕ್ಕೆ ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ವಿದ್ಯಾರ್ಥಿಗಳ ಗಲಾಟೆಯಲ್ಲಿ ಅಹಿತಕರವಾದ ಘಟನೆಗಳು ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಕಾಡತೊಡಗಿದೆ.
ಹೌದು ಅದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸಿದ್ದಲಿಂಗೇಶ್ವರ ಕಾಲನಿಯಲ್ಲಿ ಕಂಡು ಬರುವ ಬಿಸಿಎಂ ವಸತಿ ನಿಲಯದ ವಿದ್ಯಾರ್ಥಿಗಳಿಂದ ಸ್ಥಳೀಯರಿಗೆ ಕಿರಿಕಿರಿ ಆಗುತ್ತಿರುವ ಘಟನೆ ನಡೆಯುತ್ತಿದೆ. ವಿದ್ಯಾರ್ಥಿಗಳ ಕಿರಿಕಿರಿಗೆ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಇನ್ನು ಪ್ರತಿದಿನ ರಾತ್ರಿ 12 ಗಂಟೆ 1:00 ಗಂಟೆವರೆಗೂ ಕಿರುಚಾಟ ಚೀರಾಟ ಗಲಾಟೆ ಗದ್ದಲವನ್ನು ವಿದ್ಯಾರ್ಥಿಗಳು ಆರಂಭ ಮಾಡುತ್ತಾರೆ. ಇದರಿಂದ ನೆಮ್ಮದಿಯಿಂದ ಮನೆಯಲ್ಲಿ ನಿದ್ದೆ ಮಾಡಲು ಆಗುತ್ತಿಲ್ಲ ಎಂದು ಸ್ಥಳೀಯರು ಹೇಳಿದರು. ಅದಕ್ಕಾಗಿ ವಸತಿ ನಿಲಯ ಪಾಲಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಆಗ್ರಹಿಸಿದ್ದಾರೆ.
ಎಷ್ಟೋ ಜನ ವಿದ್ಯಾರ್ಥಿಗಳು ವಸತಿಯ ನಿಲಯಗಳಲ್ಲಿ ಅಧ್ಯಯನ ಮಾಡಿ ಕೆಎಎಸ್, ಐಐಎಸ್ ಅಂತಾ ಪರೀಕ್ಷೆ ಪಾಸ ಉನ್ನತ ಹುದ್ದೆಯಲ್ಲಿ ನಾಡಿನ ಸೇವೆ ಮಾಡುತ್ತಿದ್ದಾರೆ. ಅದಕ್ಕಾಗಿ ಈ ಮಕ್ಕಳಿಗೂ ಉತ್ತಮವಾದ ಸಂಸ್ಕಾರ ಸಿಗಲಿ ಎಂದು ಸ್ಥಳೀಯರ ಮನವಿ. ಒಟ್ಟಾರೆಯಾಗಿ ಬಿಸಿಎಂ ವಸತಿ ನಿಲಯ ವಿದ್ಯಾರ್ಥಿಗಳ ಕಿರಿ ಕಿರಿ ಇಂದಾಗಿ ಸ್ಥಳೀಯರ ನೆಮ್ಮದಿ ಹಾಳಾಗಿದ್ದು, ಅಧಿಕಾರಿಗಳು ಎಚ್ಚೆತ್ತು ವಿದ್ಯಾರ್ಥಿಗಳಿಗೆ ತಿಳಿ ಹೇಳಬೇಕಾಗಿದೆ.