೧೨ ಕೋಟಿ ೭೫ ಲಕ್ಷ ರೂ ವೆಚ್ಚದಲ್ಲಿ ಇಂಡಿಯಲ್ಲಿ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಕೇಂದ್ರ ಕಚೇರಿ – ಯಶವಂತರಾಯಗೌಡ
ಇಂಡಿಯಲ್ಲಿ ₹12.75 ಲಕ್ಷ ವೆಚ್ಚದಲ್ಲಿ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ ಕೇಂದ್ರ ಕಛೇರಿ : ಶಾಸಕ ಪಾಟೀಲ
ಇಂಡಿ : ಇಂಡಿಯಲ್ಲಿ ೧೨ ಕೋಟಿ ೭೫ ಲಕ್ಷ ರೂ ವೆಚ್ಚದಲ್ಲಿ ಇಂಡಿಯಲ್ಲಿ ರಾಜ್ಯ ನಿಂಬೆ ಅಭಿವೃದ್ದಿ ಮಂಡಳಿ ಕೇಂದ್ರ ಕಚೇರಿ ಮತ್ತು ನಿಂಬೆ ಅಭಿವೃದ್ದಿ ಮಂಡಳಿ ಸೌಲಭ್ಯಗಳ ಕೇಂದ್ರ ನಿರ್ಮಾಣ ಮಾಡಲಾಗುವದೆಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಸಹಭಾಗಿತ್ವದಡಿ೨೦೨೪-೨೫ನೇ ಸಾಲಿನ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿ ಮಾತನಾಡಿದರು.
ಈಗಾಗಲೇ ಮೊದಲ ಹಂತದಲ್ಲಿ ೭ ಕೋಟಿ ೫೦ ಲಕ್ಷ ಹಣ ಮಂಜೂರಿಯಾಗಿದ್ದು ಅದರಲ್ಲಿ ಈಗ ಒಂದು ಕೋಟಿ ೫೦ ಲಕ್ಷ ರೂ ಬಿಡುಗಡೆಯಾಗಿದ್ದು ಇಂಡಿಯಲ್ಲಿ ಕೇಂದ್ರ ಪ್ರಧಾನ ಕಚೇರಿ ಪ್ರಾರಂಭಿಸಲಾಗುವದು ಎಂದರು.
ಮೂರು ಎಕರೆ ಜಾಗದಲ್ಲಿ ಮಾರ್ಕೆಟಿಂಗ ಗೆ ಜಾಗ ಅದಕ್ಕೆ ಬೇಕಾಗುವ ಸುಸಜ್ಜಿತ ಕಟ್ಟಡ, ಮತ್ತು ನಿಂಬೆ ಒಳ್ಳೆಯ ದರಕ್ಕಾಗಿ ಸಣ್ಣ ಸಣ್ಣ ಕೋಲ್ಡ ಸ್ಟೋರೆಜ್ ಕಟ್ಟಡ ಮಾಡಿ ನಿಂಬೆಗೆ ಅಂತರ ರಾಷ್ಟಿçÃಯ ಮಟ್ಟದಲ್ಲಿ ಇಂಡಿಯ ನಿಂಬೆ ಎಂದು ಪ್ರಸಿದ್ದಿ ಪಡಿಸಬೇಕಾಗಿದೆ ಎಂದರು. ಈಗಾಗಲೇ ಇಂಡಿಯ ನಿಂಬೆಗೆ ಜಿ.ಐ ಟ್ಯಾಗ ದೊರೆತ್ತಿದ್ದು ಜಾಗತೀಕ ಮಟ್ಟದಲ್ಲಿ ನಿಂಬೆಯನ್ನು ರಪ್ತು ಮಾಡುವ ಕುರಿತು ಮತ್ತು ನಿಂಬೆಯ ಮೇಲೆ ಸಂಶೋಧನೆ, ಮೌಲ್ಯವರ್ಧನೆ, ಮತ್ತು ಗ್ರೆಡಿಂಗ್ ಕಾರ್ಯ ನಡೆಯಲಿದೆ ಎಂದರು.
ನಿAಬೆ ಅಭಿವೃದ್ದಿ ಮಂಡಳಿ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್.ಪಾಟೀಲ ಮಾತನಾಡಿ ನಿಂಬೆ ಅಭಿವೃದ್ದಿ ಕಚೇರಿ ಇಂಡಿಯಲ್ಲಿ ಸರಕಾರ ೨೦೧೩ ರಲ್ಲಿ ಪರವಾನಿಕೆ ನೀಡಿದೆ. ರಾಜ್ಯದಲ್ಲಿ ಶೇ ೬೦ ನಿಂಬೆ ಇಂಡಿ ತಾಲೂಕಿನಲ್ಲಿ ಬೆಳೆಯುತ್ತಿದ್ದು ಇಲ್ಲಿಯ ನಿಂಬೆ ವಿವಿಧ ರಾಜ್ಯಗಳಿಗೆ ಹೋಗುತ್ತಿದೆ. ಸಂಶೋದನೆ ಮತ್ತು ರಪ್ತು ಮಾಡುವ ಗುರಿ ಹೊಂದಿದ್ದು ಇಂದು ಒಂದು ಕೋಟಿ ೫೦ ಲಕ್ಷ ರೂ ವೆಚ್ಚದಲ್ಲಿ ಕಟ್ಟಡಕ್ಕೆ ಭೂಮಿ ಪೂಜೆ ನೇರವೇರಿಸಿದೆ ಎಂದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ, ಬಸವರಾಜ ಗೊರನಾಳ, ತಮ್ಮಣ್ಣ ಪೂಜಾರಿ, ಸಂತೋಷ ವಾಲಿಕಾರ ಮಾತನಾಡಿದರು.
ವೇದಿಕೆಯ ಮೇಲೆ ಇಒ ನಂದೀಪ ರಾಠೋಡ, ಬಾಬು ಸಾವಕಾರ ಮೇತ್ರಿ,ಅಶೋಕ ಬಿರಾದಾರ,ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಉಪಾಧ್ಯಕ್ಷ ಜಂಹಾAಗೀರ ಸೌದಾಗರ, ಜಾವೇದ ಮೋಮಿನ್,ಇಲಿಯಾಸ ಬೊರಾಮಣ , ಕೃಷಿ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ, ಮಹಾಂತೇಶ ಹಂಗರಗಿ,ಲೋಕೋಪಯೋಗಿ ಎಇಇ ದಯಾನಂದ ಮಠ,ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ,ಭೀಮಾಶಂಕರ ಮೂರಮನ, ಹಣಮಂತ ಗೊಳ್ಳಗಿ ಮತ್ತಿತರಿದ್ದರು.
ಕೃಷ್ಣಾ ಕಾಲುವೆಗೆ ಕುಡಿಯುವ ನೀರಿನ ಸಲುವಾಗಿ ಒಂದುವರೆ ಟಿಎಂಸಿ ನೀರು ಬಿಡಲಾಗಿದ್ದು ಈಗ ಮತ್ತು ಅರ್ಧ ಟಿಎಂಸಿ ನೀರು ಬಿಡಲಾಗಿದೆ ಎಂದು
ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಇಂಡಿ ಪಟ್ಟಣದ ವಿಜಯಪುರ ರಸ್ತೆಯಲ್ಲಿ ತೋಟಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆ ಸಹಭಾಗಿತ್ವದ ಡಿ ೨೦೨೪-೨೫ನೇ ಸಾಲಿನ ರಾಷ್ಟಿçÃಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಕಟ್ಟಡಕ್ಕೆ ಭೂಮಿಪೂಜೆ ನೇರವೇರಿಸಿ ಶಾಸಕ ಯಶವಂತಗೌಡ ಪಾಟೀಲರು ಮಾತನಾಡಿದರು.



















