SSLC Result 2024 : ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳ ಅದ್ವಿತೀಯ ಸಾಧನೆ..!
ಇಂಡಿ: 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿಧ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆಂದು ಪ್ರಾಂಶುಪಾಲರು ಹಾಗೂ ಶಿಕ್ಷಕರು ಅಭಿನಂದನೆ ತಿಳಿಸಿದ್ದಾರೆ.
ತಾಲ್ಲೂಕಿನ ಅಂಜುಟಗಿ ಗ್ರಾಮದಲ್ಲಿ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿಯ ಶಾಲೆಯ ವಿಧ್ಯಾರ್ಥಿನಿ ವೈಶಾಲಿ ಮಣ್ಣೂರ 608 ಅಂಕ ಪಡೆದು ಪ್ರಥಮಸ್ಥಾನ, ಅನುರಾಧ ಹಿರೇಮಾಳ 605 ಅಂಕ ಪಡೆದು ದ್ವೀತಿಯ ಸ್ಥಾನ, ಸುಪ್ರೀಯಾ ನಾಯಕ 599 ಹಾಗೂ ಅಕ್ಷತಾ ಹಳ್ಳದಮನಿ 599 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಅದು ನಮ್ಮ ಶಾಲೆಗೆ ಕ್ರೈಸ್ ಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಅದಲ್ಲದೇ ಪರೀಕ್ಷೆ ಬರೆದ ವಿಧ್ಯಾರ್ಥಿಗಳ ಪೈಕಿ ಯಾರೊಬ್ಬರೂ ಅನುವುತ್ತೀರ್ಣ – ರಾಗಿದೆ ಕ್ರೈಸ್ ಶಾಲೆಯ ಮೆರುಗು ಹೆಚ್ಚಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಚನ್ನಪ್ಪ ಸೇಠೆ ಹಾಗೂ ನಿಲಯಪಾಲಕ ಸಂಜೀವ್ ಕುಮಾರ್ ಹಿರೋಳ ಹಾಗೂ ಎಲ್ಲಾ ಶಿಕ್ಷಕ ಸಿಬ್ಬಂದಿ ವರ್ಗ ಅಭಿನಂದನೆ ಸಲ್ಲಿಸಿದ್ದಾರೆ.